ಹೆಲ್ಮೆಟ್ ಇಲ್ಲದೇ ಮೊಬೈಲ್ ನಲ್ಲಿ ಮಾತನಾಡಿಕೊಂಡು ಮೂವರ ಸವಾರಿ: ಮಹಿಳಾ ಪೇದೆಗಳಿಗೆ ಬಿತ್ತು ದಂಡ!

ಹೆಲ್ಮಟ್ ಧರಿಸದೇ ಮೊಬೈಲ್ ನಲ್ಲಿ ಮಾತನಾಡಿಕೊಂಡು ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಮೂವರು ಮಹಿಳಾ ಪೇದೆಗಳಿಗೆ 3,300 ರು ದಂಡ ವಿಧಿಸಲಾಗಿದೆ.
ಮಹಿಳಾ ಪೇದೆಗಳ ತ್ರಿಬಲ್ ರೈಡಿಂಗ್
ಮಹಿಳಾ ಪೇದೆಗಳ ತ್ರಿಬಲ್ ರೈಡಿಂಗ್

ಖಮ್ಮಮ್: ಹೆಲ್ಮಟ್ ಧರಿಸದೇ ಮೊಬೈಲ್ ನಲ್ಲಿ ಮಾತನಾಡಿಕೊಂಡು ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಮೂವರು ಮಹಿಳಾ ಪೇದೆಗಳಿಗೆ 3,300 ರು ದಂಡ ವಿಧಿಸಲಾಗಿದೆ.

ದಂಡ ವಿಧಿಸಿದ ಮಹಿಳೆಯರಲ್ಲಿ ನಗರದ ಸಶಸ್ತ್ರ ವಿಭಾಗದ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಮತ್ತು ಒಬ್ಬರು ತೆಲಂಗಾಣದ ಟೌನ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಸಿವಿಲ್ ಕಾನ್‌ಸ್ಟೆಬಲ್ ಆಗಿದ್ದಾರೆ.

ಖಮ್ಮಮ್ಮ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆಯುಕ್ತ ವಿಷ್ಣು ಎಸ್ ವಾರಿಯರ್ ಅವರ ಆದೇಶದಂತೆ ಮಹಿಳಾ ಪೇದೆಗಳಿಗೆ ದಂಡ ವಿಧಿಸಲಾಗಿದೆ.

ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಈ ಅಪರಾಧವನ್ನು ಸಿಸಿಟಿವಿ ಕ್ಯಾಮೆರಾಗಳಿಂದ ಕಂಡು ಹಿಡಿದಿದ್ದಾರೆ. ಹೆಲ್ಮೆಟ್ ಇಲ್ಲದೆ  ಪೇದೆಗಳು ಟ್ರಿಬಲ್ ಸ್ಕೂಟರ್ ಸವಾರಿ ಮಾಡುವುದನ್ನು ಮತ್ತು ಮೊಬೈಲ್ ಫೋನ್ಗಳಲ್ಲಿ ಮಾತನಾಡುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಮೂವರು ಏಪ್ರಿಲ್ 9ರಂದು ವೈಎಸ್ ಶರ್ಮಿಳಾ ಅವರು ನಡೆಸುತ್ತಿದ್ದ  ಸಭೆಯ ಬಂದೋಬಸ್ತ್ ಗೆ ತೆರಳಿದ್ದರು. ಸಂಚಾರ ಪೊಲೀಸರು ಈ ಸಂಬಂಧ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ.

ದಂಡದ ಹೊರತಾಗಿ ಇಲಾಖೆ ತನಿಖೆ ನಡೆಸುವಂತೆ ಆಯುಕ್ತರು ಆದೇಶಿಸಿದ್ದಾರೆ. ಇಬ್ಬರು ನಗರ ಸಶಸ್ತ್ರ ವಿಭಾಗದ ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಬಂದೋಬಸ್ತ್ ಡ್ಯೂಟಿ ನೀಡಲಾಗಿತ್ತು ಮತ್ತು ಸ್ಕೂಟರ್‌ನಲ್ಲಿ ಸಭೆ ಆಯೋಜಿಸಿದ್ದ ಮೈದಾನಕ್ಕೆ ಹೋಗುತ್ತಿದ್ದರು.

ಹೋಗುವ ದಾರಿ ಮಧ್ಯೆ ಅವರು ಒನ್ ಟೌನ್ ಪೊಲೀಸ್ ಠಾಣೆಯ ಸಿವಿಲ್ ಮಹಿಳಾ ಪೇದೆಯನ್ನು ಕೂರಿಸಿಕೊಂಡು ಅದೇ ದಿಕ್ಕಿನಲ್ಲಿ ಸಾಗುತ್ತಿದ್ದರು. ಆಯುಕ್ತರ ಈ ಕ್ರಮವನ್ನು
ಸ್ಥಳೀಯರು ಸ್ವಾಗತಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com