ಭಾರತದ ಬಾಗಿಲು ಇತರ ದೇಶಗಳಿಗೆ ತೆರೆದೇ ಇದೆ- ಎಸ್‍ ಜೈಶಂಕರ್

ಇತರ ದೇಶಗಳಿಗೆ ಬಾಗಿಲು ಮುಚ್ಚುವುದಿಲ್ಲ ಎಂದಿರುವ ಭಾರತ, ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಎಲ್ಲ ದೇಶಗಳು ಸಮನಾಗಿ ಲಸಿಕೆಗಳನ್ನು ಪಡೆಯಲು ಜಾಗತಿಕ ನ್ಯಾಯಸಮ್ಮತ ಒಕ್ಕೂಟವನ್ನು ನಿರ್ಮಿಸಲು ಕರೆ ನೀಡಿದೆ.
ವಿದೇಶಾಂಗ ಸಚಿವ ಎಸ್ .ಜೈಶಂಕರ್
ವಿದೇಶಾಂಗ ಸಚಿವ ಎಸ್ .ಜೈಶಂಕರ್

ನವದೆಹಲಿ: ಇತರ ದೇಶಗಳಿಗೆ ಬಾಗಿಲು ಮುಚ್ಚುವುದಿಲ್ಲ ಎಂದಿರುವ ಭಾರತ, ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಎಲ್ಲ ದೇಶಗಳು ಸಮನಾಗಿ ಲಸಿಕೆಗಳನ್ನು ಪಡೆಯಲು ಜಾಗತಿಕ ನ್ಯಾಯಸಮ್ಮತ ಒಕ್ಕೂಟವನ್ನು ನಿರ್ಮಿಸಲು ಕರೆ ನೀಡಿದೆ.

ರಾಜಧಾನಿಯಲ್ಲಿ ಮಂಗಳವಾರ ವರ್ಚುವಲ್ ವೇದಿಕೆ ಮೂಲಕ ಆರಂಭವಾದ ಭೌಗೋಳಿಕ ರಾಜಕೀಯ ಮತ್ತು ಭೂ-ಭೌತಶಾಸ್ತ್ರದ ಕುರಿತ ಸರ್ಕಾರದ ಪ್ರಮುಖ ಸಮ್ಮೇಳನವಾದ ರೈಸಿನಾ ಸಂವಾದದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್,  ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು ಪ್ರಮುಖವಾಗಿದೆ. ಇಂದು ರಾಜತಾಂತ್ರಿಕತೆಯಲ್ಲಿ, ಒಳ್ಳೆಯದನ್ನು ಮಾಡುವುದು ಪ್ರಮುಖವೆನಿಸಿದೆ. ಭಾರತದ ಲಸಿಕೆ ಮೈತ್ರಿ ನೀತಿಯು ವಸುಧೈವ ಕುಟುಂಬಕಂನ  ದೊಡ್ಡ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತ, ಜನವರಿಯಿಂದ 80ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್‍-19 ಲಸಿಕೆಗಳನ್ನು ಪೂರೈಸಿದೆ. ಕೋವಿಡ್ -19 ಲಸಿಕೆಗಳನ್ನು ತಯಾರಿಸುವ ಭಾರತದ ಸಾಮರ್ಥ್ಯ ಜಾಗತಿಕ ಸಹಕಾರದ ಉದಾಹರಣೆಯಾಗಿದೆ. ಇದನ್ನು "ಏಕಮುಖ ರಸ್ತೆ" ಎಂದು ನೋಡಲಾಗುವುದಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com