'ನಾನು ಬೀದಿ ಹೋರಾಟಗಾರ್ತಿ, ಯುದ್ಧಭೂಮಿಯಿಂದ ಹೋರಾಟ ಮಾಡ್ತಿನಿ': ಮಮತಾ ಬ್ಯಾನರ್ಜಿ

ಚುನಾವಣಾ ಆಯೋಗ ಹೇರಿದ್ದ ನಿರ್ಬಂಧ ಮಂಗಳವಾರ ಸಂಜೆ ಅಂತ್ಯವಾದ ಬಳಿಕ ಎದುರಾಳಿ ಬಿಜೆಪಿ ವಿರುದ್ಧ ಚಾಲೆಂಜ್ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಾನೊಬ್ಬಳು ಬೀದಿ ಹೋರಾಟಗಾರ್ತಿ, ಯುದ್ದಭೂಮಿಯಿಂದ ಹೋರಾಟ ಮಾಡುತ್ತೇನೆ ಎಂದು ಗುಡುಗಿದರು.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ಚುನಾವಣಾ ಆಯೋಗ ಹೇರಿದ್ದ ನಿರ್ಬಂಧ ಮಂಗಳವಾರ ಸಂಜೆ ಅಂತ್ಯವಾದ ಬಳಿಕ ಎದುರಾಳಿ ಬಿಜೆಪಿ ವಿರುದ್ಧ ಚಾಲೆಂಜ್ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಾನೊಬ್ಬಳು ಬೀದಿ ಹೋರಾಟಗಾರ್ತಿ, ಯುದ್ದಭೂಮಿಯಿಂದ ಹೋರಾಟ ಮಾಡುತ್ತೇನೆ ಎಂದು ಗುಡುಗಿದರು.

24 ಗಂಟೆಗಳ ಪ್ರಚಾರ ನಿರ್ಬಂಧ ಅಂತ್ಯವಾದ ಬಳಿಕ ಬರಾಸತ್ ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ಕೋಟ್ಯಂತರ ರೂ. ಹಣ ಹೊಂದಿದ್ದು, ಚುನಾವಣೆಗಾಗಿ ಬಂದಿದ್ದಾರೆ. ನಿಮ್ಮ ಬಳಿ ಹಣವಿದೆ, ಮಧ್ಯವರ್ತಿಗಳು ಇದ್ದಾರೆ, ಹೋಟೆಲ್‌ಗಳಿವೆ, ದೇಶದ ಎಲ್ಲಾ ಎಲ್ಲ ಏಜೆನ್ಸಿಗಳು ನಿಮ್ಮ ಬಳಿ ಇವೆ. ಆದರೆ, ಆದರೆ ಆಗಲೂ ನೀವು ಯಾಕೆ ಸೋಲುತ್ತೀರಿ ಎಂಬುದು ನಿಮಗೆ ತಿಳಿದಿದೆಯೇ? ಏಕೆಂದರೆ ನಾನೊಬ್ಬಳು ಬೀದಿ ಹೋರಾಟಗಾರ್ತಿ, ಯುದ್ಧ ಭೂಮಿಯಿಂದ ಹೋರಾಟ ಮಾಡ್ತಿನಿ. ಮೇಲಿನಿಂದ ಸೂಚನೆಗಳನ್ನು ನೀಡುವ ಮೂಲಕ ನಾನು ಹೋರಾಡುವುದಿಲ್ಲ ಎಂದು ಪರೋಕ್ಷವಾಗಿ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.

ಎಲ್ಲಾ ಕೇಂದ್ರಿಯ ಸಂಸ್ಥೆಗಳು ಮತ್ತು ಏಜೆನ್ಸಿಗಳ ನೆರವಿನಿಂದ ತನನ್ನು ತಡೆಯಲು ಏಕೆ ಬಿಜೆಪಿ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಪ್ರಶ್ನಿಸಿದ ಮಮತಾ, ದೆಹಲಿಯಿಂದ ಇಡೀ ದೇಶಾದ್ಯಂತ, ನನನ್ನು ತಡೆಗಟ್ಟಲು ಬಿಜೆಪಿ ಎಲ್ಲಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಬಂಗಾಳವನ್ನು ಅವಮಾನಿಸಲಾಗುತ್ತಿದೆ ಮತ್ತು ಸೆರೆಹಿಡಿಯಲಾಗುತ್ತಿದೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ, ನಾವು ಬಂಗಾಳವನ್ನು ಗುಜರಾತ್ ಆಗಲು ಬಿಡುವುದಿಲ್ಲ, ನನನ್ನು ತಡೆಯುವುದರಿಂದ ಯಾವುದೇ ಲಾಭವಿಲ್ಲ. ನನ್ನ ಮೇಲೆ ದಾಳಿಯಾದರೆ, ಪ್ರತ್ಯುತ್ತರವಾಗಿ ನಾನು ಕೂಡಾ ದಾಳಿ ಮಾಡಬಹುದು ಎಂದರು.

ಕಳೆದ 24 ಗಂಟೆಗಳಲ್ಲಿ ನಾನು ಚುನಾವಣೆಗಾಗಿ ಪ್ರಚಾರ ನಡೆಸಲು ಆಗಲಿಲ್ಲ. ಐದನೇ ಹಂತದ ಮೊದಲು 72 ಗಂಟೆಗಳ ಕಾಲ ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ. ಒಂದು ಕಡೆ, ಬಿಜೆಪಿ ಪ್ರಚಾರ ಮಾಡುತ್ತದೆ ಮತ್ತೊಂದೆಡೆ ಟಿಎಂಸಿ ಪ್ರಚಾರ ಮಾಡಲು ಆಗುತ್ತಿಲ್ಲ. ಈ ಬಗ್ಗೆ ಯೋಚನೆ ಮಾಡಲು ಜನರಿಗೆ ಬಿಡುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com