50 ಲಕ್ಷ ಡೋಸ್ ಕೋವಿಡ್-19 ಲಸಿಕೆ ಪೂರೈಸುವಂತೆ ಕೇಂದ್ರಕ್ಕೆ ಪತ್ರ ಬರೆದ ಕೇರಳ ಮುಖ್ಯಮಂತ್ರಿ!

ಲಸಿಕೆಗಳ ಕೊರತೆಯ ನಡುವೆಯೂ 50 ಲಕ್ಷ ಡೋಸ್ ಕೋವಿಡ್-19 ಲಸಿಕೆಯನ್ನು ಪೂರೈಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸೋಮವಾರ ಪತ್ರ ಬರೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರಂ: ಲಸಿಕೆಗಳ ಕೊರತೆಯ ನಡುವೆಯೂ 50 ಲಕ್ಷ ಡೋಸ್ ಕೋವಿಡ್-19 ಲಸಿಕೆಯನ್ನು ಪೂರೈಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸೋಮವಾರ ಪತ್ರ ಬರೆದಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಿಗೆ ಪತ್ರ ಬರೆದಿರುವ ವಿಜಯನ್,  54,40,740 ಕೋವಿಶೀಲ್ಡ್, 2, 43, 620 ಡೋಸ್ ಕೋವಾಕ್ಸಿನ್ ಸೇರಿದಂತೆ ಈವರೆಗೂ 56,84,360 ಡೋಸ್ ಕೋವಿಡ್-19 ಲಸಿಕೆ ಕೇರಳ ರಾಜ್ಯಕ್ಕೆ ಬಂದಿದೆ. ಏಪ್ರಿಲ್ 11ರವರೆಗೂ 48,24,505 ಡೋಸ್ ಲಸಿಕೆ ನೀಡಲಾಗಿದೆ. ನಮ್ಮಲ್ಲಿ ದಾಸ್ತಾನು ಇನ್ನೂ ಮೂರ್ನಾಲ್ಕು ದಿನಗಳಿಗೆ ಮಾತ್ರ ಸಾಕಾಗಲಿದೆ ಎಂದು ಹೇಳಿದ್ದಾರೆ.

ಲಸಿಕೆಗಳ ಕೊರತೆಯ ಹೊರತಾಗಿಯೂ ಆರೋಗ್ಯ ಸಚಿವಾಲಯದ ಗಮನಕ್ಕೆ ತಂದರೂ ಹೆಚ್ಚುವರಿಯಾಗಿ ಕೋವಿಡ್-19 ಲಸಿಕೆಯನ್ನು ಪೂರೈಸಿಲ್ಲ. ಆದ್ದರಿಂದ ಮುಂದಿನ ಕೆಲವು ದಿನಗಳಲ್ಲಿ ಹೆಚ್ಚುವರಿಯಾಗಿ 50 ಲಕ್ಷ ಡೋಸ್ ಕೋವಿಡ್-19 ಲಸಿಕೆಯನ್ನು ನಮ್ಮ ರಾಜ್ಯಕ್ಕೆ ಪೂರೈಸಬೇಕು. ಇದರಿಂದ ಸಾಂಕ್ರಾಮಿಕ ನಿಯಂತ್ರಿಸುವ ನಿಟ್ಟಿನಲ್ಲಿ ಲಸಿಕಾ ಅಭಿಯಾನ ಯಾವುದೇ ಅಡ್ಡಿಯಿಲ್ಲದೆ ಯಶಸ್ವಿಯಾಗಿ ಮುಂದುವರೆಯಲಿದೆ ಎಂದು ವಿಜಯನ್  ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com