ಕೋವಿಡ್ ಲಸಿಕೆ ಕೊರತೆಯಿಲ್ಲ ಆದರೆ, ಯೋಜಿತ ನಿರ್ವಹಣೆಯ ಸಮಸ್ಯೆಯಿದೆ: ಕೇಂದ್ರ ಸರ್ಕಾರ

ಸುಮಾರು 1.67 ಕೋಟಿ ಡೋಸ್ ಕೋವಿಡ್-19 ಲಸಿಕೆ ಈಗಲೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿರುವುದಾಗಿ ಮಂಗಳವಾರ ತಿಳಿಸಿರುವ ಲಸಿಕೆ ಕೊರತೆಯ ಸಮಸ್ಯೆಯೇನೂ ಆಗಿಲ್ಲ, ಆದರೆ, ಉತ್ತಮ ಯೋಜನೆಯ ಸಮಸ್ಯೆಯಿರುವುದಾಗಿ ಹೇಳಿದೆ.
ಲಸಿಕೆ ಪಡೆಯುತ್ತಿರುವ ಮಹಿಳೆಯ ಚಿತ್ರ
ಲಸಿಕೆ ಪಡೆಯುತ್ತಿರುವ ಮಹಿಳೆಯ ಚಿತ್ರ

ನವದೆಹಲಿ: ಸುಮಾರು 1.67 ಕೋಟಿ ಡೋಸ್ ಕೋವಿಡ್-19 ಲಸಿಕೆ ಈಗಲೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿರುವುದಾಗಿ ಮಂಗಳವಾರ ತಿಳಿಸಿರುವ ಲಸಿಕೆ ಕೊರತೆಯ ಸಮಸ್ಯೆಯೇನೂ ಆಗಿಲ್ಲ, ಆದರೆ, ಉತ್ತಮ ಯೋಜನೆಯ ಸಮಸ್ಯೆಯಿರುವುದಾಗಿ ಹೇಳಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಈವರೆಗೂ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 13,10,90,370 ಡೋಸ್ ಲಸಿಕೆಯನ್ನು ಪಡೆದಿವೆ. ಅದರಲ್ಲಿ ವ್ಯರ್ಥವಾದದ್ದು ಸೇರಿದಂತೆ ಒಟ್ಟಾರೇ,  11,43,69,977 ಡೋಸ್ ಲಸಿಕೆ ಬಳಕೆಯಾಗಿದೆ. ಇಂದು ಬೆಳಗ್ಗೆ 11 ಗಂಟೆವರೆಗಿನ ಮಾಹಿತಿ ಪ್ರಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,67,20,693 ಡೋಸ್ ಬಳಕೆಯಾಗದ ಲಸಿಕೆ ಲಭ್ಯವಿದೆ. ಇಂಂದಿನಿಂದ ಏಪ್ರಿಲ್ ಅಂತ್ಯದವರೆಗೂ 2,01,22,960 ಡೋಸ್ ಲಸಿಕೆಯನ್ನು ಪೈಪ್ ಲೈನ್ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪೂರೈಸಲಾಗುವುದು ಎಂದು ತಿಳಿಸಿದರು.

ಇದು ಉತ್ತಮ ಯೋಜನೆಯ ಕೊರತೆಯ ಸಮಸ್ಯೆಯನ್ನು ತೋರಿಸುತ್ತದೆ. ಆದರೆ, ಲಸಿಕೆಯ ಕೊರತೆಯಿಲ್ಲ. ಕಾಲಕಾಲಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಲಭ್ಯವಿರುವಂತೆ ಮಾಡಲಾಗಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಹರಿಯಾಣ ಮತ್ತು ಗುಜರಾತಿನಲ್ಲಿ ದೈನಂದಿನ ಮರಣ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದಾಗಿ ಅವರು ಮಾಹಿತಿ ನೀಡಿದರು.

ಕೆಲ ರಾಜ್ಯಗಳಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಸೋಂಕು ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆಯತ್ತ ಗಮನ ಹರಿಸಬೇಕಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿಕೆ ಪೌಲ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com