ದೇಶದಲ್ಲಿನ ಕೋವಿಡ್-19 ಪರಿಸ್ಥಿತಿ ಕುರಿತು ಚರ್ಚಿಸಲು ಏಪ್ರಿಲ್ 17ರಂದು ಕಾರ್ಯಕಾರಿ ಸಮಿತಿ ಸಭೆ: ಕಾಂಗ್ರೆಸ್ 

ದೇಶದ ಕೋವಿಡ್-19 ಪರಿಸ್ಥಿತಿ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷವು ಏಪ್ರಿಲ್ 17 ರಂದು ತನ್ನ ಕಾರ್ಯಕಾರಿ ಸಮಿತಿಯ ಸಭೆ ಕರೆದಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದ ಕೋವಿಡ್-19 ಪರಿಸ್ಥಿತಿ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷವು ಏಪ್ರಿಲ್ 17 ರಂದು ತನ್ನ ಕಾರ್ಯಕಾರಿ ಸಮಿತಿಯ ಸಭೆ ಕರೆದಿದೆ ಎಂದು ತಿಳಿದುಬಂದಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಚರ್ಚಿಸಲು ಪಕ್ಷದ ಉನ್ನತ ಕಾರ್ಯಕಾರಿ ಸಮಿತಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆದಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಪತ್ರವೊಂದರಲ್ಲಿ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾಂಗ್ರೆಸ್ ಕಾರ್ಯಕಾರಿ  ಸಮಿತಿ ಸಭೆ ನಡೆಯಲಿದ್ದು, ಏಪ್ರಿಲ್ 17 ರ ಶನಿವಾರದ ಸಭೆಯಲ್ಲಿ ದೇಶದಲ್ಲಿನ ಕೋವಿಡ್-19 ರ ಎರಡನೇ ತರಂಗಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. 

ಕೋವಿಡ್ 19 ರ ಎರಡನೇ ಅಲೆಯ ಈಗಾಗಲೇ ಭಾರತದಲ್ಲಿ 13.7 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ, ಇದು ಜಾಗತಿಕ ಪ್ರಕರಣಗಳಲ್ಲಿ ಶೇಕಡಾ 10 ರಷ್ಟಿದೆ. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಇಬ್ಬರೂ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದು,  ಬಿಕ್ಕಟ್ಟನ್ನು ನಿಭಾಯಿಸಲು ಕ್ರಮಗಳನ್ನು ಸೂಚಿಸಿದ್ದಾರೆ ಎನ್ನಲಾಗಿದೆ. 

ಇನ್ನು ಸೋನಿಯಾ ಗಾಂಧಿ ಎಲ್ಲಾ ದೇಶೀಯ ಲಸಿಕೆ ತಯಾರಕರಿಗೆ ತುರ್ತು ಅನುಮೋದನೆ ನೀಡಬೇಕು ಎಂದು ಕೇಳಿದ್ದು, ರಾಹುಲ್ ಗಾಂಧಿ ಭಾರತೀಯ ರೋಗಿಗಳಿಗೆ ಪೂರೈಸಲು ಲಸಿಕೆಗಳ ವಿದೇಶಿ ರಫ್ತು ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com