ರಾಜಕೀಯ ಸಮಾವೇಶ, ಧಾರ್ಮಿಕ ಸಭೆಗಳು ಕೋವಿಡ್-19 ಸೂಪರ್-ಸ್ಪ್ರೆಡರ್ಸ್: ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ

ದೇಶದಲ್ಲಿ ಒಂದು ದಿನ ವರದಿಯಾಗಿರುವ ಕೋವಿಡ್-19 ಸೋಂಕು ಪ್ರಸರಣ ಸಂಖ್ಯೆ 2 ಲಕ್ಷದ ಹತ್ತಿರ ತಲುಪಿದ್ದು, ಪರಿಸ್ಥಿತಿಯ ಬಗ್ಗೆ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ ಕಳವಳ ವ್ಯಕ್ತಪಡಿಸಿದೆ. 

Published: 14th April 2021 05:54 PM  |   Last Updated: 14th April 2021 06:01 PM   |  A+A-


coronavirus

ಕೊರೋನಾ

Posted By : Srinivas Rao BV
Source : The New Indian Express

ನವದೆಹಲಿ: ದೇಶದಲ್ಲಿ ಒಂದು ದಿನ ವರದಿಯಾಗಿರುವ ಕೋವಿಡ್-19 ಸೋಂಕು ಪ್ರಸರಣ ಸಂಖ್ಯೆ 2 ಲಕ್ಷದ ಹತ್ತಿರ ತಲುಪಿದ್ದು, ಪರಿಸ್ಥಿತಿಯ ಬಗ್ಗೆ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ ಕಳವಳ ವ್ಯಕ್ತಪಡಿಸಿದೆ. 

ರೋಗ ನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್​ಟಿಎಜಿಐ) ನ ಡಾ. ಎನ್ ಕೆ ಅರೋರಾ ಈ ಬಗ್ಗೆ ಮಾತನಾಡಿದ್ದು, ರಾಜಕೀಯ ಸಮಾವೇಶ, ಧಾರ್ಮಿಕ ಸಭೆಗಳು, ರೈತರ ಚಳುವಳಿ ಕೊರೋನಾ ಸೂಪರ್ ಸ್ಪ್ರೆಡರ್ಸ್ ಆಗಿವೆ ಎಂದು ಹೇಳಿದ್ದಾರೆ. 

ವಿಧಾನಸಭಾ ಚುನಾವಣೆಗಳು, ಕುಂಭಮೇಳ, ರೈತರ ಪ್ರತಿಭಟನೆಗಳ ಬಗ್ಗೆ ಪರೋಕ್ಷವಾಗಿ ಡಾ. ಅರೋರಾ ಉಲ್ಲೇಖಿಸಿದ್ದಾರೆ.

"ಯುವಜನತೆ ಅಸಡ್ಡೆ ತೋರುತ್ತಿದ್ದಾರೆ. ಸಣ್ಣ ಸಭೆಗಳು, ಪಾರ್ಟಿಗಳಲ್ಲಿ ಭಾಗವಹಿಸಲು ಇಚ್ಛಿಸುತ್ತಿದ್ದಾರೆ. ಇದರ ಜೊತೆಗೆ ರಾಜಕೀಯ ಸಮಾವೇಶ, ಧಾರ್ಮಿಕ ಸಭೆಗಳು, ರೈತರ ಚಳುವಳಿ ಕೊರೋನಾ ಸೂಪರ್ ಸ್ಪ್ರೆಡರ್ಸ್ ಆಗಿದ್ದು, ಇವುಗಳನ್ನು ತಡೆಯದೇ ಬೇರೆ ಯಾವುದೂ ನಮ್ಮ ಸಹಾಯಕ್ಕೆ ಪ್ರಯೋಜನವಾಗುವುದಿಲ್ಲ, ಇವುಗಳನ್ನು ರಾಜಕೀಯದ ಬೆಂಬಲ ಹಾಗೂ ಜಾರಿಗೊಳಿಸುವ ಅಧಿಕಾರದಿಂದ ಅಷ್ಟೇ ಮಾಡಬಹುದಾಗಿದೆ" ಎಂದು ಡಾ. ಎನ್ ಕೆ ಅರೋರಾ ಹೇಳಿದ್ದಾರೆ. 

ಸ್ಥಳೀಯವಾಗಿ ಲಾಕ್ ಡೌನ್ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿರುವ ಅವರು, ರಾಷ್ಟ್ರೀಯ ಲಾಕ್ ಡೌನ್ ಅಗತ್ಯವಿಲ್ಲ ಎಂದಿದ್ದಾರೆ. ಹಿಂದಿನ ಲಾಕ್ ಡೌನ್ ನಿಂದ ಹೇಗೆ ರೋಗ ಹರಡುವಿಕೆಯನ್ನು ತಡೆಯಬಹುದು, ಹಾಗೂ ಆರ್ಥಿಕ ಪರಿಣಾಮಗಳನ್ನು ಎದುರಿಸುವುದು ಹೇಗೆ ಎಂಬುದನ್ನು ನಾವು ಕಲಿತಿದ್ದೇನೆ. ಕಲಿತಿರುವ ಅನುಭವಗಳನ್ನು ಈಗ ಬಳಕೆ ಮಾಡಿಕೊಳ್ಳಬೇಕಿದೆ ಎಂದು ಅರೋರಾ ಅಭಿಪ್ರಾಯಪಟ್ಟಿದ್ದು, ಸ್ಥಳೀಯವಾಗಿ ಅಗತ್ಯಕ್ಕೆ ತಕ್ಕಂತೆ ಲಾಕ್ ಡೌನ್ ವಿಧಿಸುವ ವಿಷಯವಾಗಿ ಮಹಾರಾಷ್ಟ್ರದ ಉದಾಹರಣೆ ನೀಡಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp