ಕೋವಿಡ್-19: ಭಯ, ಗೊಂದಲದಿಂದಾಗಿ 18,000 ಎಎಐ ನೌಕರರು ಲಸಿಕೆ ತೆಗೆದುಕೊಂಡಿಲ್ಲ!

ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುವಂತೆ ಸರ್ಕಾರದ ನಿರಂತರ ಮನವಿಯ ಹೊರತಾಗಿಯೂ, ಭಯ ಮತ್ತು ಗೊಂದಲದಿಂದಾಗಿ ಜನರು ಚುಚ್ಚುಮದ್ದನ್ನು ಪಡೆಯಲು ಮುಂದೆ ಬರುತ್ತಿಲ್ಲ.
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ನವದೆಹಲಿ: ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುವಂತೆ ಸರ್ಕಾರದ ನಿರಂತರ ಮನವಿಯ ಹೊರತಾಗಿಯೂ, ಭಯ ಮತ್ತು ಗೊಂದಲದಿಂದಾಗಿ ಜನರು ಚುಚ್ಚುಮದ್ದನ್ನು ಪಡೆಯಲು ಮುಂದೆ ಬರುತ್ತಿಲ್ಲ. ವಿಮಾನ ನಿಲ್ದಾಣ ಪ್ರಾಧಿಕಾರ ನೌಕರರ ಒಕ್ಕೂಟದ(ಎಎಇಯು) 18,000 ಉದ್ಯೋಗಿಗಳ ಪರಿಸ್ಥಿತಿ ಸಹ ಹೀಗೆ ಆಗಿದೆ.

ಎಎಇಯು ಪ್ರಧಾನ ಕಾರ್ಯದರ್ಶಿ ಬಲರಾಜ್ ಸಿಂಗ್ ಅಹ್ಲಾವತ್ ಅವರು ತಮ್ಮ ಉದ್ಯೋಗಿಗಳಿಗೆ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

"ನಮ್ಮ ಒಕ್ಕೂಟವು ದೇಶಾದ್ಯಂತ ಸುಮಾರು 18,000 ಉದ್ಯೋಗಿಗಳನ್ನು ಹೊಂದಿದೆ ಮತ್ತು ಸುಮಾರು 12,000 ಉದ್ಯೋಗಿಗಳು 45 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ, ಆದರೆ ಹೆಚ್ಚಿನ ಉದ್ಯೋಗಿಗಳು ಭಯ ಮತ್ತು ಗೊಂದಲದಲ್ಲಿದ್ದಾರೆ, ಲಸಿಕೆ ಪಡೆದರೆ ಅಡ್ಡಪರಿಣಾಮ ಬೀರುತ್ತದೆ ಮತ್ತು ಲಸಿಕೆ ಪಡೆದ ನಂತರವೂ ಕೊರೋನಾ ಪಾಸಿಟಿವ್ ಬಂದಿರುವ ಅನೇಕ ವರದಿಗಳಿವೆ. ಹೀಗಾಗಿ ಭಯ ಪಡುತ್ತಿದ್ದಾರೆ" ಎಂದು ಎಎಇಯು ಪ್ರಧಾನ ಕಾರ್ಯದರ್ಶಿ ಎಎನ್‌ಐಗೆ ತಿಳಿಸಿದ್ದಾರೆ.

"ಎಎಇಯು ಯೂನಿಯನ್ ನೌಕರರನ್ನು ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ನೇಮಕ ಮಾಡಲಾಗಿದೆ. ಆದರೆ ದುರದೃಷ್ಟವಶಾತ್ ಲಸಿಕೆ ಶಿಬಿರವನ್ನು ಸ್ಥಾಪಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ 100 ಉದ್ಯೋಗಿಗಳು ಸಹ ಲಸಿಕೆ ಪಡೆಯಲು ಸಿದ್ಧರಿಲ್ಲ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com