ಆಕ್ಸಿಜನ್ ಪೂರೈಕೆ ಸ್ಥಗಿತಗೊಳಿಸಿದ ವಾರ್ಡ್ ಬಾಯ್: ಕೋವಿಡ್ ರೋಗಿ ಸಾವು

ವಾರ್ಡ್ ಬಾಯ್ ಒಬ್ಬ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಆಕ್ಸಿಜನ್ ಮಾಸ್ಕ್ ತೆಗೆದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿವಪುರಿ: ವಾರ್ಡ್ ಬಾಯ್ ಒಬ್ಬ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಆಕ್ಸಿಜನ್ ಮಾಸ್ಕ್ ತೆಗೆದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

ಈ ಸಂಬಂಧ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮೃತ ರೋಗಿಯ ಸಂಬಂಧಿಕರು ಒತ್ತಾಯಿಸಿದ್ದಾರೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾದಿಕಾರಿ ತಿಳಿಸಿದ್ದಾರೆ.

ಸುರೇಂದ್ರ ಶರ್ಮಾ ಸಾವನ್ನಪ್ಪಿದ ವ್ಯಕ್ತಿ. ಉಸಿರಾಟದ ತೊಂದರೆಯಿಂದಾಗಿ ನಮ್ಮ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕ್ಸಿಜನ್ ಸಪೋರ್ಟ್ ನೀಡಿದ್ದರೂ ಅವರ ಸ್ಥಿತಿ ಸುಧಾರಿಸಿರಲಲ್ಲ.

ಆದರೆ ಕಳೆದ ರಾತ್ರಿ ಆಸ್ಪತ್ರೆ ಸಿಬ್ಬಂದಿ ಅಕ್ಸಿಜನ್ ತೆಗೆದಿದ್ದಾರೆ. ಆಸ್ಪತ್ರೆಗೆ ಬಂದ ಕೂಡಲೇ ನಾನು ವಾರ್ಡ್ ಬಾಯ್ ಮತ್ತು ನರ್ಸ್ ಗೆ ಆಕ್ಸಿಜನ್ ಪೂರೈಕೆ ತೆಗೆಯದಂತೆ ಮನವಿ ಮಾಡಿಕೊಂಡೆ, ಆದರೆ ಅವರು ಅದಕ್ಕೆ ಬೆಲೆ ನೀಡಲಿಲ್ಲ, ಹೀಗಾಗಿ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಮೃತ ವ್ಯಕ್ತಿಯ ಪುತ ದೀಪಕ್ ತಿವಾರಿ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಮೂವರು ವೈದ್ಯರನ್ನೊಳಗೊಂಡ ತಂಡ ರಚಿಸಿದ್ದು 48 ಗಂಟೆಯೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com