ದೆಹಲಿಯ ನಿಜಾಮುದ್ದೀನ್‌ ಮಸೀದಿ ತೆರೆಯಲು ಹೈಕೋರ್ಟ್‌ ಅನುಮತಿ: 50 ಜನರ ಮಿತಿ ಹೇರಿಕೆ

ಪವಿತ್ರ ರಂಜಾನ್ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್ ಮರ್ಕಾಜ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ದೆಹಲಿ ಹೈಕೋರ್ಟ್‌ ಷರತ್ತುಬದ್ಧ ಅನುಮತಿ ನೀಡಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪವಿತ್ರ ರಂಜಾನ್ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್ ಮರ್ಕಾಜ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ದೆಹಲಿ ಹೈಕೋರ್ಟ್‌ ಷರತ್ತುಬದ್ಧ ಅನುಮತಿ ನೀಡಿತು.
 
ಆದರೆ, ಮಸೀದಿಗೆ 50 ಜನರಿಗೆ ಪ್ರವೇಶ ಮತ್ತು ದಿನಕ್ಕೆ ಐದು ಬಾರಿ ಪ್ರಾರ್ಥನೆಯನ್ನು ಸೀಮಿತಗೊಳಿಸಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಘೋಷಿಸಿದ ಹಿನ್ನೆಲೆಯಲ್ಲಿ ವಿದೇಶಿಯರು ಸೇರಿದಂತೆ ನೂರಾರು ಜನರನ್ನು ಮಸೀದಿಯೊಳಗೆ ಇರಿಸಲಾಗಿತ್ತು. ಅವರಲ್ಲಿ ಅನೇಕರಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡಿದ್ದರಿಂದ ಮಾರ್ಕಾಜ್ ವಿವಾದದ ಕೇಂದ್ರವಾಗಿತ್ತು.

ಧಾರ್ಮಿಕ ಸ್ಥಳವನ್ನು ಪುನಃ ತೆರೆಯುವಂತೆ ದೆಹಲಿ ವಕ್ಫ್ ಮಂಡಳಿಯ ಮನವಿ ಪರಿಗಣಿಸಿದ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಪ್ರತಿಬಾ ಎಂ ಸಿಂಗ್, ಮಸೀದಿಯ ಮೊದಲ ಮಹಡಿಯಲ್ಲಿ ಮಾತ್ರ ಪ್ರಾರ್ಥನೆಗೆ ಅವಕಾಶ ಕಲ್ಪಿಸಿದರು. ಜನರ ಮಿತಿ ಹೆಚ್ಚಿಸುವ ಮತ್ತು ಎಲ್ಲಾ ಮಹಡಿಗಳನ್ನು ಮತ್ತೆ ತೆರೆಯುವ ಮನವಿಯನ್ನು ಪರಿಗಣಿಸಲು ನ್ಯಾಯಾಲಯ ನಿರಾಕರಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com