ಲಸಿಕೆ ಉತ್ಸವ: ಮೂರು ರಾಜ್ಯಗಳಲ್ಲಿ ಒಂದು ಕೋಟಿಗೂ ಅಧಿಕ ಕೋವಿಡ್ ಲಸಿಕೆ ಡೋಸ್ ನೀಡಿಕೆ

'ಲಸಿಕೆ ಉತ್ಸವ' ವೇಳೆ ದೇಶಾದ್ಯಂತ ಕೋಟ್ಯಾಂತರ ಜನರಿಗೆ ಕೋವಿಡ್ -19 ಲಸಿಕೆ ಡೋಸ್ ಗಳನ್ನು ನೀಡಲಾಗಿದ್ದು, ಮೂರು ರಾಜ್ಯಗಳಲ್ಲಿ ಒಂದು ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 'ಲಸಿಕೆ ಉತ್ಸವ' ವೇಳೆ ದೇಶಾದ್ಯಂತ ಕೋಟ್ಯಾಂತರ ಜನರಿಗೆ ಕೋವಿಡ್ -19 ಲಸಿಕೆ ಡೋಸ್ ಗಳನ್ನು ನೀಡಲಾಗಿದ್ದು, ಮೂರು ರಾಜ್ಯಗಳಲ್ಲಿ ಒಂದು ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ತಿಳಿಸಿದೆ.

ಸಮಾಜದ ದುರ್ಬಲ ವರ್ಗಗಳಿಗೆ ಲಸಿಕೆ ಹಾಕುವ ಪ್ರಯತ್ನದಲ್ಲಿ ಭಾರತ ಅನೇಕ ಎತ್ತರಗಳನ್ನು ಮುಟ್ಟುತ್ತಿದೆ. 
ಕೋವಿಡ್ ವೈರಸ್ ವಿರುದ್ಧ ಏಪ್ರಿಲ್ 11 ರಿಂದ 14 ರವರೆಗೆ 'ಲಸಿಕೆ ಉತ್ಸವ' ಎಂದು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನೀಡಿದ ಸ್ಪಷ್ಟ ಕರೆಯಂತೆ ಖಾಸಗಿ ಮತ್ತು ಸರ್ಕಾರಿ ಕೆಲಸದ ಸ್ಥಳಗಳಲ್ಲಿ ಅನೇಕ ಕೋವಿಡ್ ಲಸಿಕೆ ಕೇಂದ್ರಗಳು ಕಾರ್ಯನಿರ್ವಹಿಸಿದ್ದವು ಎಂದು ಸಚಿವಾಲಯ ತಿಳಿಸಿದೆ.

ಪ್ರತಿದಿನ ಸರಾಸರಿ 45,000 ಲಸಿಕೆ ನೀಡಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 'ಲಸಿಕೆ ಉತ್ಸವ'ದ ಸಮಯದಲ್ಲಿ 1.28 ಕೋಟಿ ಕೋವಿಡ್ -19 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 

ನಾಲ್ಕು ದಿನಗಳ 'ಲಸಿಕೆ ಉತ್ಸವ'ದ ಮೊದಲ ದಿನ 63,800, ಎರಡನೇ ದಿನ 71,000, 3ನೇ ದಿನ 67,893 ಮತ್ತು ನಾಲ್ಕನೇ ದಿನ 69,974 ಲಸಿಕೆ ನೀಡಿಕೆ ಕೇಂದ್ರಗಳು ಕಾರ್ಯನಿರ್ವಹಿಸಿವೆ.
 
ಸಾಮಾನ್ಯವಾಗಿ ಭಾನುವಾರಗಳಂದು ಸರಾಸರಿ ಸುಮಾರು 16 ಲಕ್ಷ ಡೋಸ್ ಗಳನ್ನು ನೀಡಲಾಗುತ್ತಿದೆ. ‘ಲಸಿಕೆ ಉತ್ಸವ’ದ ವೇಳೆ ಭಾನುವಾರದಂದು 27 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. 

'ಲಸಿಕೆ ಉತ್ಸವ'ದ ನಾಲ್ಕು ದಿನಗಳಲ್ಲೂ ಹೆಚ್ಚಿನ ಪ್ರಮಾಣದ ಲಸಿಕೆ ನೀಡಲಾಗಿದೆ. ಏಪ್ರಿಲ್ 11 ರಂದು 29,33,418, ಏಪ್ರಿಲ್ 12ರಂದು 40,04,521, ಏಪ್ರಿಲ್ 13ರಂದು 26,46,528 ಹಾಗೂ ಏಪ್ರಿಲ್ 14 33,13,848 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ.

ಮೂರು ರಾಜ್ಯಗಳಲ್ಲಿ 1 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಮಹಾರಾಷ್ಟ್ರ (1,11,19,018), ರಾಜಸ್ಥಾನ(1,02,15,471) ಮತ್ತು ಉತ್ತರ ಪ್ರದೇಶ (1,00,17,650) ಈ ರಾಜ್ಯಗಳಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com