ಆಕ್ಸಿಜನ್ ಬಳಕೆ ಇತಿಮಿತಿಯಲ್ಲಿರಲಿ, ಪೋಲಾಗದಂತೆ ನೋಡಿಕೊಳ್ಳಿ: ರಾಜ್ಯಗಳಿಗೆ ಕೇಂದ್ರ ಸೂಚನೆ

ದೇಶದಲ್ಲಿ ಸಾಕಷ್ಟು ಪ್ರಮಾಣದ ಆಮ್ಲಜನಕವಿದೆ ಎಂದು ಹೇಳುತ್ತಿರುವ ಕೇಂದ್ರ ಸರ್ಕಾರ ಇದರ ಮಧ್ಯೆ ವೈದ್ಯಕೀಯ ಆಮ್ಲಜನಕವನ್ನು ತರ್ಕಬದ್ಧವಾಗಿ ಬಳಸಿಕೊಳ್ಳಬೇಕು ಮತ್ತು ವ್ಯರ್ಥವಾಗದಂತೆ ನೋಡಿಕೊಳ್ಳಬೇಕೆಂದು ರಾಜ್ಯಗಳಿಗೆ ಸೂಚಿಸಿದೆ.

Published: 15th April 2021 03:07 PM  |   Last Updated: 15th April 2021 03:07 PM   |  A+A-


representation purpose only

ಸಂಗ್ರಹ ಚಿತ್ರ

Posted By : Vishwanath S
Source : PTI

ನವದೆಹಲಿ: ದೇಶದಲ್ಲಿ ಸಾಕಷ್ಟು ಪ್ರಮಾಣದ ಆಮ್ಲಜನಕವಿದೆ ಎಂದು ಹೇಳುತ್ತಿರುವ ಕೇಂದ್ರ ಸರ್ಕಾರ ಇದರ ಮಧ್ಯೆ ವೈದ್ಯಕೀಯ ಆಮ್ಲಜನಕವನ್ನು ತರ್ಕಬದ್ಧವಾಗಿ ಬಳಸಿಕೊಳ್ಳಬೇಕು ಮತ್ತು ವ್ಯರ್ಥವಾಗದಂತೆ ನೋಡಿಕೊಳ್ಳಬೇಕೆಂದು ರಾಜ್ಯಗಳಿಗೆ ಸೂಚಿಸಿದೆ.

ಕೊರೋನಾ ಪೀಡಿತ ರೋಗಿಗಳ ಚಿಕಿತ್ಸೆಯಲ್ಲಿ ವೈದ್ಯಕೀಯ ಆಮ್ಲಜನಕವು ಒಂದು ನಿರ್ಣಾಯಕ ಅಂಶವಾಗಿದೆ. ಮಾರ್ಚ್ 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಂತರ ಸಚಿವಾಲಯದ ಸಶಕ್ತ ಗುಂಪ(ಇಜಿ2)ನ್ನು ರಚಿಸಲಾಗಿದ್ದು ಇದು ಪೀಡಿತ ರಾಜ್ಯಗಳಲ್ಲಿನ ವೈದ್ಯಕೀಯ ಆಮ್ಲಜನಕ ಸೇರಿದಂತೆ ಅಗತ್ಯ ವೈದ್ಯಕೀಯ ಸಲಕರಣೆಗಳ ಲಭ್ಯತೆಯನ್ನು ಅಧ್ಯಯನ ಮಾಡಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

'ಆಮ್ಲಜನಕ ಘಟಕಗಳ ಉತ್ಪಾದನೆ ಮತ್ತು ಲಭ್ಯವಿರುವ ಹೆಚ್ಚುವರಿ ದಾಸ್ತಾನುಗಳ ಜೊತೆಗೆ, ಪ್ರಸ್ತುತ ಆಮ್ಲಜನಕದ ಲಭ್ಯತೆಯು ಸಾಕಾಗುತ್ತದೆ' ಎಂದು ಸಚಿವಾಲಯ ಹೇಳಿದೆ. ಕಳೆದ ಎರಡು ದಿನಗಳಿಂದ ಪ್ರತಿದಿನ ತನ್ನ ಸಂಪೂರ್ಣ ಸಾಮರ್ಥ್ಯದಲ್ಲಿ ಆಮ್ಲಜನಕವನ್ನು ಉತ್ಪಾದಿಸುತ್ತಿದೆ ಎಂದು ತಿಳಿಸಿದೆ.

ಅಲ್ಲದೆ, ಜಿಲ್ಲೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಆಮ್ಲಜನಕವನ್ನು ಸುಗಮವಾಗಿ ಪೂರೈಸಲು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ಸಿಲಿಂಡರ್‌ಗಳು, ಟ್ಯಾಂಕರ್‌ಗಳು ಇತ್ಯಾದಿಗಳ ಪರಿಶೀಲನಾ ಅವಶ್ಯಕತೆ ಇದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

'ದೇಶದಲ್ಲಿ ಸುಮಾರು 7127 ಮೆ.ಟನ್ ಆಮ್ಲಜನಕ ಉತ್ಪಾದನಾ ಸಾಮರ್ಥ್ಯವಿದೆ. ಇನ್ನು ಅಗತ್ಯಕ್ಕೆ ಅನುಗುಣವಾಗಿ, ಉಕ್ಕಿನ ಸ್ಥಾವರಗಳೊಂದಿಗೆ ಲಭ್ಯವಿರುವ ಹೆಚ್ಚುವರಿ ಆಮ್ಲಜನಕವನ್ನು ಸಹ ಬಳಸಿಕೊಳ್ಳಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp