ಗುಜರಾತ್: 15 ದಿನದ ಹಸುಗೂಸು ಕೊರೋನಾಗೆ ಬಲಿ

ಗುಜರಾತಿನ ಸೂರತ್ ನಗರದ ಆಸ್ಪತ್ರೆಯೊಂದರಲ್ಲಿ ಕೋವಿಡ್-19 ಸೋಂಕಿತ ಮಹಿಳೆಗೆ ಜನಿಸಿದ 15 ದಿನದ ಹಸುಗೂಸು ಹೆಣ್ಣು ಮಗುವೊಂದು ಮೃತಪಟ್ಟಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸೂರತ್: ಗುಜರಾತಿನ ಸೂರತ್ ನಗರದ ಆಸ್ಪತ್ರೆಯೊಂದರಲ್ಲಿ ಕೋವಿಡ್-19 ಸೋಂಕಿತ ಮಹಿಳೆಗೆ ಜನಿಸಿದ 15 ದಿನದ ಹಸುಗೂಸು ಹೆಣ್ಣು ಮಗುವೊಂದು ಮೃತಪಟ್ಟಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಏಪ್ರಿಲ್ 1 ರಂದು ಸೋಂಕಿನೊಂದಿಗೆ ಶಿಶು  ಜನಿಸಿದ್ದು, ಆ ಮಗುವಿನ ತಾಯಿ ಕೂಡ ಸೋಂಕಿಗೆ ತುತ್ತಾಗಿದ್ದಾರೆ ಎಂದು ಡೈಮಂಡ್ ಆಸ್ಪತ್ರೆಯ ಟ್ರಸ್ಟಿ ದಿನೇಶ್ ನವಾಡಿಯಾ ಹೇಳಿದ್ದಾರೆ.

ಮಗುವಿನ ತಾಯಿಯನ್ನು ಬೇರೆೊಂದು ಆಸ್ಪತ್ರೆಗೆ ಸ್ಥಳಾಂತರಿಸಿದ್ದರೆ, ನವಜಾತ ಶಿಶುವಿನ ಸ್ಥಿತಿ ಕ್ಷೀಣಿಸಿದಾಗ ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಆದರೆ, ಗುರುವಾರ ರಾತ್ರಿ ಆ ಮಗು ಕೊನೆಯುಸಿರೆಳೆಯಿತು ಎಂದು ಅವರು ತಿಳಿಸಿದ್ದಾರೆ. 

ಕೋವಿಡ್-19 ಸೋಂಕಿನಿಂದ ಇತ್ತೀಚಿಗೆ ಚೇತರಿಸಿಕೊಂಡಿದ್ದ ಸೂರತ್ ಮಾಜಿ ಮೇಯರ್ ಡಾ. ಜಗದೀಶ್ ಪಾಟೀಲ್, ಶಿಶು ವಿನ ಚಿಕಿತ್ಸೆಗಾಗಿ  ರಕ್ತದ ಫ್ಲಾಸ್ಮಾವನ್ನು ದಾನ ಮಾಡಿದ್ದರು. ನವ ಜಾತ ಶಿಶುವನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನಿಸಿದರು, ಆದರೆ, ಆಗಲಿಲ್ಲ. ಎಂದು ಅವರು ತಿಳಿಸಿದ್ದಾರೆ. 

ಸೂರತ್ ಗೆ ಹೊಂದಿಕೊಂಡಂತೆ ಇರುವ ತಾಪಿ ಜಿಲ್ಲೆಯ  14 ದಿನಗಳ ಬಾಲಕ ಶಿಶುವೊಂದು ಸೋಂಕಿನಿಂದಾಗಿ ಸೂರತ್ ನ ನೂತನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com