ಕೊರೋನಾ: ಮುಂದಿನ ಹಂತಗಳ ಬಂಗಾಳ ಚುನಾವಣೆಯ ಏಕ ಕಾಲಕ್ಕೆ ನಡೆಸಲು ಬಿಜೆಪಿ ವಿರೋಧ

ಪಶ್ಚಿಮ ಬಂಗಾಳದಲ್ಲಿ ಮುಂದಿನ ಹಂತಗಳ ಚುನಾವಣೆಯನ್ನು ಒಂದೇ ಬಾರಿಗೆ ನಡೆಸುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. 
ಬಿಜೆಪಿ
ಬಿಜೆಪಿ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮುಂದಿನ ಹಂತಗಳ ಚುನಾವಣೆಯನ್ನು ಒಂದೇ ಬಾರಿಗೆ ನಡೆಸುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. 

ಈ ರೀತಿ ಮಾಡುವುದರಿಂದ ಚುನಾವಣೆ ಇನ್ನಷ್ಟೇ ನಡೆಯಬೇಕಿರುವ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಸಮಸ್ಯೆಯಾಗಲಿದೆ ಎಂದು ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಮುಖ್ಯ ಚುನಾವಣಾ ಅಧಿಕಾರಿಯ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

"ಬಿಜೆಪಿ ನಾಯಕ ಸ್ವಪನ್ ದಾಸ್ ಗುಪ್ತ ಮಾತನಾಡಿ, ಪ್ರಜಾಪ್ರಭುತ್ವದ ಚೈತನ್ಯದ ಮೇಲೆ ಪರಿಣಾಮ ಬೀರುವಂತಹ ಯಾವುದೇ ಕ್ರಮಗಳೂ ಬಿಜೆಪಿಗೆ ಬೇಡವಾಗಿದೆ". ನಮ್ಮ ಪಕ್ಷ, ಚುನಾವಣಾ ಆಯೋಗ ವಿಧಿಸಿರುವ ಕೋವಿಡ್-19 ಶಿಷ್ಟಾಚಾರಕ್ಕೆ ಬದ್ಧವಾಗಿರುತ್ತದೆ ಎಂದು ಸ್ವಪನ್ ದಾಸ್ ಗುಪ್ತ ಹೇಳಿದ್ದಾರೆ. 

ನಾವು ಉಳಿದ ಚುನಾವಣೆಯ ದಿನಾಂಕವನ್ನು ಒಟ್ಟಿಗೆ ಸೇರಿಸುವುದರ ವಿಷಯವಾಗಿ ಏನನ್ನೂ ಮಾತನಾಡಿಲ್ಲ. 8 ಹಂತಗಳಲ್ಲೇ ಚುನಾವಣೆ ನಡೆಯಲಿದೆ ಎಂಬ ವಿಶ್ವಾಸವಿದೆ ಎಂದು ಸ್ವಪನ್ ದಾಸ್ ಗುಪ್ತ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com