ಈ ವರ್ಷ ಸಾಮಾನ್ಯ ಮುಂಗಾರು: ಹವಾಮಾನ ಇಲಾಖೆ ಮುನ್ಸೂಚನೆ

ಈ ವರ್ಷ ನೈರುತ್ಯ ಮುಂಗಾರು ಸಾಧಾರಣವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನೈರುತ್ಯ ಮುಂಗಾರು ಪರಿಣಾಮ ದೇಶಾದ್ಯಂತ ಶೇ 98 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ರಾಜೀವನ್‌ ತಿಳಿಸಿದ್ದಾರೆ. 

Published: 16th April 2021 01:14 PM  |   Last Updated: 16th April 2021 01:33 PM   |  A+A-


File photo

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ನವದೆಹಲಿ: ಈ ವರ್ಷ ನೈರುತ್ಯ ಮುಂಗಾರು ಸಾಧಾರಣವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನೈರುತ್ಯ ಮುಂಗಾರು ಪರಿಣಾಮ ದೇಶಾದ್ಯಂತ ಶೇ 98 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ರಾಜೀವನ್‌ ತಿಳಿಸಿದ್ದಾರೆ. 

ಪ್ರತಿವರ್ಷ ಜೂನ್‌ 1ರೊಳಗೆ ನೈರುತ್ಯ ಮುಂಗಾರು ಕೇರಳಕ್ಕೆ ಪ್ರವೇಶಿಸಲಿದೆ. ನೈರುತ್ಯ ಮಾರುತಗಳಿಂದ ದೇಶಾದ್ಯಂತ ವ್ಯಾಪಕ ಮಳೆಯಾಗುತ್ತದೆ. ಕಳೆದ ವರ್ಷ ದೇಶಾದ್ಯಂತ ವಾಡಿಕೆಯ ಸರಾಸರಿಗಿಂತ ಹೆಚ್ಚು ಮಳೆಯಾಗಿತ್ತು. ಭಾರತದಲ್ಲಿ ಮಳೆಗಾಲ ಜೂನ್ ಹಾಗೂ ಸೆಪ್ಟೆಂಬರ್ ನಡುವಣ ಅವಧಿಯಾಗಿದೆ. 

ಆದರೆ, ಈ ಬಾರಿ ಆ ಸಮಯದಲ್ಲಿ ಶೇ 96 ರಿಂದ 104 ರಷ್ಟು ಮಳೆ ಬೀಳುವ ಮುನ್ಸೂಚನೆಯನ್ನು ಐಎಂಡಿ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಸರಾಸರಿ ಶೇ 98 ರಷ್ಟು ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. ಈ ಅಂದಾಜು ದೀರ್ಘ ಅವಧಿಯ ಸರಾಸರಿ ಮಳೆಯನ್ನು ಆಧರಿಸಿದೆ ಅಂದಾಜಿಸಲಾಗುತ್ತದೆ. 1961 ಮತ್ತು 2010 ರ ನಡುವೆ ಮುಂಗಾರು 88 ಸೆಂ.ಮೀ ಇದೆ.

ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರದ ಪ್ರಸ್ತುತ ತಾಪಮಾನವನ್ನು ಆಧರಿಸಿದೆ ಮುನ್ಸೂಚನೆ ನೀಡಲಾಗಿದೆ. ಈ ಎರಡು ಸಮುದ್ರಗಳ ತಾಪಮಾನ ಭಾರತೀಯ ಮುಂಗಾರಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ಐಎಂಡಿ ಮೇ ಅಂತ್ಯದ ವೇಳೆಗೆ ಮತ್ತೊಮ್ಮೆ ಮುಂಗಾರು ಮುನ್ಸೂಚನೆಯನ್ನು ನವೀಕರಿಸಲಿದೆ. 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp