ಕೋವಿಡ್‌-19: ಕೇಂದ್ರ ಸರ್ಕಾರದ ಕಾರ್ಯತಂತ್ರ ಕುರಿತು ರಾಹುಲ್‌ ಗಾಂಧಿ ಟೀಕೆ

ಕೋವಿಡ್‌–19 ನಿಯಂತ್ರಿಸುವಲ್ಲಿ  ಕೇಂದ್ರ ಸರ್ಕಾರ ರೂಪಿಸಿದ ಕಾರ್ಯತಂತ್ರಗಳನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಅವರು ಶುಕ್ರವಾರ ಟೀಕಿಸಿದ್ದಾರೆ.
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ

ನವದೆಹಲಿ: ಕೋವಿಡ್‌–19 ನಿಯಂತ್ರಿಸುವಲ್ಲಿ  ಕೇಂದ್ರ ಸರ್ಕಾರ ರೂಪಿಸಿದ ಕಾರ್ಯತಂತ್ರಗಳನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಅವರು ಶುಕ್ರವಾರ ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ‘ಮನಬಂದಂತೆ ಲಾಕ್‌ಡೌನ್‌ ಹೇರುವುದು, ಗಂಟೆ ಬಾರಿಸುವುದು ಮತ್ತು ದೇವರನ್ನು ಪ್ರಾರ್ಥಿಸಿ ಹಾಡುವುದು’ ಸರ್ಕಾರದ ಕಾರ್ಯತಂತ್ರಗಳಾಗಿವೆ ಎಂದು ವ್ಯಂಗ್ಯವಾಡಿದ್ದಾರೆ.

ಕೋವಿಡ್‌–19 ನಿಯಂತ್ರಣ ಮತ್ತು ಲಸಿಕೆ ಅಭಿಯಾನದ ಕುರಿತು ಸರ್ಕಾರ ಕೈಗೊಂಡ ನಿರ್ಧಾರಗಳು ಮತ್ತು ಯೋಜನೆಗಳನ್ನು ಈ ಹಿಂದೆಯೂ ಕಾಂಗ್ರೆಸ್‌ ಟೀಕಿಸಿತ್ತು. ಈ ಹಿಂದೆ ಕಾಂಗ್ರೆಸ್ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಮುಹಮ್ಮದ್ ಬಿನ್ ತುಘಲಕ್ ಆಡಳಿತಕ್ಕೆ ಹೋಲಿಕೆ ಮಾಡಿತ್ತು. 

ವೈಜ್ಞಾನಿಕವಾಗಿ ಮತ್ತು ಸಮಗ್ರವಾಗಿ ಯೋಜನೆ ರೂಪಿಸದೆ ಸರ್ಕಾರ ಮನಸ್ಸಿಗೆ ಬಂದಂತೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com