ಭಾನುವಾರ ಲಾಕ್‌ಡೌನ್, 2ನೇ ಬಾರಿ ಮಾಸ್ಕ್ ಧರಿಸದಿದ್ದರೆ ರೂ. 10,000 ದಂಡ: ಉತ್ತರ ಪ್ರದೇಶ ಸರ್ಕಾರ ಘೋಷಣೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾವೈರಸ್ ಪ್ರಕರಣಗಳ ಹಿನ್ನೆಲೆ ಉತ್ತರ ಪ್ರದೇಶ ಸರ್ಕಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಭಾನುವಾರ ಮಾರುಕಟ್ಟೆಗಳನ್ನು ಮುಚ್ಚಲು ಹೇಳಿದ್ದು "ಸಂಡೇ ಲಾಕ್ ಡೌನ್" ಘೋಷಿಸಿದೆ. 
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾವೈರಸ್ ಪ್ರಕರಣಗಳ ಹಿನ್ನೆಲೆ ಉತ್ತರ ಪ್ರದೇಶ ಸರ್ಕಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಭಾನುವಾರ ಮಾರುಕಟ್ಟೆಗಳನ್ನು ಮುಚ್ಚಲು ಹೇಳಿದ್ದು "ಸಂಡೇ ಲಾಕ್ ಡೌನ್" ಘೋಷಿಸಿದೆ. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘನೆ ಮಾಡಿದ್ದರೆ ಮೊದಲ ಬಾರಿ 1,000 ರೂ ಮತ್ತು ಎರಡನೇ ಬಾರಿಗಾದರೆ 10,000 ರೂ. ದಂಡ ವಿಧಿಸುವುದಾಗಿ ಪ್ರಕಟಿಸಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಮಾಹಿತಿ ವಿಭಾಗ)ನವನೀತ್ ಸೆಹಗಲ್, “ಬೇರೆ ಜನರ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ವಿವಿಧ ದಿನಗಳಲ್ಲಿ ಲಾಕ್ ಮಾಡಲಾಗುವ ಮಾರುಕಟ್ಟೆಗಳನ್ನು ಈಗ ಭಾನುವಾರ ಲಾಕ್ ಮಾಡುತ್ತೇವೆ ಮತ್ತು ಭಾನುವಾರದಂದು ನೈರ್ಮಲ್ಯೀಕರಣ ಮತ್ತು ಸ್ವಚ್ಚತಾ ಕಾರ್ಯಗಳನ್ನು ಮಾಡಲಾಗುವುದು. ” ಎಂದಿದ್ದಾರೆ.

ಗುರುವಾರ, ಉತ್ತರ ಪ್ರದೇಶದಲ್ಲಿ22,439 ಹೊಸ ಕೋವಿಡ್ ಪ್ರಕರಣಗಳ ವರದಿಯಾಗಿದೆ. ಇದು ಸಾಂಕ್ರಾಮಿಕ ರೋಗ ಹರಡಿದ ನಂತರದಲ್ಲಿ ಒಂದೇ ದಿನ ದಾಖಲಾದ ಅತ್ಯಂತ ಹೆಚ್ಚಿನ ಸಂಖ್ಯೆಯ ಪ್ರಕರಣಗಳಾಗಿದೆ. 2 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇರುವ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ರಾತ್ರಿ 8 ರಿಂದ ಬೆಳಿಗ್ಗೆ 7 ರವರೆಗೆ ಕಟ್ಟುನಿಟ್ಟಿನ ಕರ್ಫ್ಯೂ ಘೋಷಿಸಿದೆ. ಖಾಸಗಿ ಆಸ್ಪತ್ರೆಗಳನ್ನು ಮೀಸಲಾದ ಕೋವಿಡ್ -19 ಆಸ್ಪತ್ರೆಗಳಾಗಿ ಪರಿವರ್ತಿಸುವಂತೆ ಕಾನ್ಪುರ್, ವಾರಣಾಸಿ ಮತ್ತು ಪ್ರಯಾಗರಾಜ್‌ನಂತಹ 10 ಜಿಲ್ಲೆಗಳಲ್ಲಿ ಜಿಲ್ಲಾಡಳಿತಗಳಿಗೆ ಸರ್ಕಾರ ಆದೇಶಿಸಿದೆ.

“ಎಲ್ಲಾ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸಬೇಕು. ಪ್ರಯಾಗರಾಜ್‌ನಲ್ಲಿ, ಅವಿಲಾಂಬ್ ಯುನೈಟೆಡ್ ಮೆಡಿಕಲ್ ಕಾಲೇಜನ್ನು ಮೀಸಲಾದ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುವುದು ”ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಎಲ್ಲಾ 108 ಆಂಬುಲೆನ್ಸ್‌ಗಳನ್ನು ರಾಜ್ಯದ ಕೋವಿಡ್ ರೋಗಿಗಳಿಗೆ ಮಾತ್ರ ಬಳಸಲಾಗುವುದು ಎಂದು ಸರ್ಕಾರ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com