ಕೋವಿಡ್-19: ಮುಂಬೈಯಲ್ಲಿ ಆಕ್ಸಿಜನ್ ಪೂರೈಕೆ, ಹಾಸಿಗೆ ಸೌಕರ್ಯ ಕುರಿತು ಮುಖ್ಯಮಂತ್ರಿ ಠಾಕ್ರೆ ನೇತೃತ್ವದಲ್ಲಿ ಸಭೆ 

ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ಜನರು ಕ್ಷೀಪ್ರಗತಿಯಲ್ಲಿ ಕೋವಿಡ್-19 ಪರೀಕ್ಷೆ ವರದಿ ಪಡೆಯಬೇಕು, ಅಧಿಕಾರಿಗಳು ಪರಿಣಾಮಕಾರಿಯಾಗಿ ಹಾಸಿಗೆ , ಔಷಧಿ ನಿರ್ವಹಣೆಯೊಂದಿಗೆ ಅತ್ಯುತ್ತಮವಾದ ವೈದ್ಯಕೀಯ ಆಕ್ಸಿಜನ್ ಪೂರೈಸಬೇಕು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ

ಮುಂಬೈ: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ಜನರು ಕ್ಷೀಪ್ರಗತಿಯಲ್ಲಿ ಕೋವಿಡ್-19 ಪರೀಕ್ಷೆ ವರದಿ ಪಡೆಯಬೇಕು, ಅಧಿಕಾರಿಗಳು ಪರಿಣಾಮಕಾರಿಯಾಗಿ ಹಾಸಿಗೆ, ಔಷಧಿ ನಿರ್ವಹಣೆಯೊಂದಿಗೆ ಅತ್ಯುತ್ತಮವಾದ ವೈದ್ಯಕೀಯ ಆಕ್ಸಿಜನ್ ಪೂರೈಸಬೇಕು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ತಿಳಿಸಿದ್ದಾರೆ.

ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದಲ್ಲಿ ನಡೆದ ಮುಂಬೈ ಕೋವಿಡ್-19 ಪರಿಸ್ಥಿತಿ ಪರಾಮರ್ಶನಾ ಸಭೆಯಲ್ಲಿ ಬಿಎಂಸಿ ಆಯುಕ್ತ ಐಎಸ್ ಚಹಾಲ್ ಕೂಡಾ ಪಾಲ್ಗೊಂಡಿದ್ದರು. ಮುಂಬೈಯ 153 ಕೋವಿಡ್ ಆಸ್ಪತ್ರೆಗಳಲ್ಲಿ 20,400 ಹಾಸಿಗೆಗಳಿವೆ. ಇದನ್ನು ಮುಂದಿನ  ವಾರದೊಳಗೆ 22 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಎಂದು ಚಹಾಲ್ ತಿಳಿಸಿದರು.

ಪ್ರತಿದಿನ 8 ಸಾವಿರದಿಂದ 10 ಸಾವಿರ ಪ್ರಕರಣಗಳು ಕಂಡುಬರುತ್ತಿದ್ದು, ಸುಮಾರು 10 ಸಾವಿರ ರೋಗಿಗಳು ಪ್ರತಿದಿನ ಡಿಸ್ಚಾರ್ಜ್ ಆಗುತ್ತಿದ್ದಾರೆ. ಪ್ರಸ್ತುತ 3,900 ಹಾಸಿಗೆಗಳು ಲಭ್ಯವಿರುವುದಾಗಿ ಬಿಎಂಸಿ ಮುಖ್ಯಸ್ಥರು ಹೇಳಿದರು. 2 ಲಕ್ಷ ರೆಮಿಡಿಸಿವಿರ್ ಬಾಟಲಿಗಳನ್ನು ಖರೀದಿಸಲಾಗಿದ್ದು, 25 ಸಾವಿರ ಬಾಟಲಿಗಳು ಲಭ್ಯವಿರುವುದಾಗಿ ಅವರು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com