ಕೋವಿಡ್-19 ಎರಡನೇ ಅಲೆ 100 ದಿನಗಳವರೆಗೆ ಇರಲಿದೆ: ತಜ್ಞರ ಸಲಹೆ 

ಕೊರೋನಾವೈರಸ್  ಎರಡನೇ ಅಲೆ 100 ದಿನಗಳವರೆಗೆ ಇರಲಿದೆ ಮತ್ತು ಜನಸಂಖ್ಯೆಯ ಶೇ. 70 ರಷ್ಟು ಲಸಿಕೆ ಮತ್ತು ರೋಗ ನಿರೋಧಕ ಶಕ್ತಿ ಸಾಧಿಸುವವರೆಗೂ ಇಂತಹ ಅಲೆಗಳು ಬರುತ್ತಲೆ ಇರುತ್ತವೆ ಎಂದು ಆಗ್ನೇಯ ದೆಹಲಿ ಪೊಲೀಸ್ ತಜ್ಞರು ಸಿದ್ಧಪಡಿಸಿರುವ ಸಲಹೆಗಳಲ್ಲಿ ಹೇಳಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೊರೋನಾವೈರಸ್  ಎರಡನೇ ಅಲೆ 100 ದಿನಗಳವರೆಗೆ ಇರಲಿದೆ ಮತ್ತು ಜನಸಂಖ್ಯೆಯ ಶೇ. 70 ರಷ್ಟು ಲಸಿಕೆ ಮತ್ತು ರೋಗ ನಿರೋಧಕ ಶಕ್ತಿ ಸಾಧಿಸುವವರೆಗೂ ಇಂತಹ ಅಲೆಗಳು ಬರುತ್ತಲೆ ಇರುತ್ತವೆ ಎಂದು ಆಗ್ನೇಯ ದೆಹಲಿ ಪೊಲೀಸ್ ತಜ್ಞರು ಸಿದ್ಧಪಡಿಸಿರುವ ಸಲಹೆಗಳಲ್ಲಿ ಹೇಳಲಾಗಿದೆ. 

ಪೊಲೀಸ್ ಸಿಬ್ಬಂದಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಡಾ. ನೀರಜ್ ಕೌಶಿಕ್  ನೀಡಿರುವ ಸಲಹೆಯಲ್ಲಿ  ಹೊಸ ರೂಪಾಂತರಿತ ವೈರಸ್ ಲಸಿಕೆ ಹಾಕಿಸಿದ್ದರೂ ಸಹ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಆದಕಾರಣ,  ಲಸಿಕೆ ಪಡೆದ ಜನರಲ್ಲೂ ಪ್ರಕರಣಗಳು, ಮತ್ತೆ ಸೋಂಕು ಬರುತ್ತಿದೆ.  ಈ ರೂಪಾಂತರಿತ ವೈರಸ್  ಒಬ್ಬ ಸದಸ್ಯನಿಗೆ ಅಂಟಿಕೊಂಡರೆ ಇಡೀ ಕುಟುಂಬ ಸೋಂಕಿಗೆ ಒಳಗಾಗುತ್ತದೆ.

ಇದು ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ  ಎಂದು ಡಾ. ಕೌಶಿಕ್ ವರದಿಯಲ್ಲಿ ತಿಳಿಸಿದ್ದಾರೆ. ನಿಯಮಿತ ಆರ್ ಟಿ- ಪಿಸಿಆರ್ ಪರೀಕ್ಷೆಗಳು ರೂಪಾಂತರಿ ವೈರಸ್ ನ್ನು ಪತ್ತೆ ಮಾಡದಿರಬಹುದು. ಆದಾಗ್ಯೂ, ವಾಸನೆ ಗೊತ್ತಾಗದಿದ್ದರೆ ಪಾಸಿಟಿವ್ ಬಂದಿದೆ ಎಂದು ತಿಳಿಯಬಹುದು ಎಂದು ಅವರು ಹೇಳಿದ್ದಾರೆ.

ಕೋವಿಡ್-19 ಎರಡನೇ ಅಲೆ 100 ದಿನಗಳವರೆಗೆ ಇರಬಹುದು. ಆದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ನಿರ್ಲಕ್ಷಿಸಬೇಡಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಅವರು ಸಲಹೆ ನೀಡಿದ್ದಾರೆ. ಇತ್ತೀಚಿನ ಪ್ರವೃತ್ತಿಗಳ ಪ್ರಕಾರ ವೈರಸ್ ಮೇಲ್ಮೈ ಹರಡುವಿಕೆಯಿಂದ ಅಷ್ಟು ತೊಂದರೆಯಿಲ್ಲ ಇಲ್ಲ ಎಂಬುದು ತಿಳಿದುಬಂದಿದೆ. ಸೋಂಕಿತ ವ್ಯಕ್ತಿಯೊಂದಿಗೆ 15 ನಿಮಿಷಗಳಿಗಿಂತ ಹೆಚ್ಚು ಕಾಲ ಸಂಪರ್ಕಕ್ಕೆ  ನಡೆಸಿದಾಗ  ಸೋಂಕಿಗೆ ಒಳಗಾಗುವ ಸಾಧ್ಯತೆ ತುಂಬಾ ಹೆಚ್ಚಾಗುತ್ತದೆ ಎಂದು ಡಾ. ಕೌಶಿಕ್ ತಿಳಿಸಿದ್ದಾರೆ. 

ಬೊಜ್ಜು, ಮಧುಮೇಹ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇತ್ಯಾದಿ ಇರುವವರು ಹೆಚ್ಚುವರಿ ಮುನ್ನೆಚ್ಚರಿಕೆ ವಹಿಸಬೇಕು, ಅತಿಯಾದ ವ್ಯಾಯಾಮ ಮತ್ತು ಜಂಕ್ ಫುಡ್ ಸೇವನೆಯನವ್ನು ತಪ್ಪಿಸಬೇಕು,  ಜ್ಯೂಸ್, ಎಳನೀರು ಕುಡಿಯಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com