ಮಹಾಮಾರಿ ಅಟ್ಟಹಾಸ: ಕಳೆದ 15 ದಿನಗಳಲ್ಲಿ ವಾಯುಪಡೆ ಅಧಿಕಾರಿಯೊಬ್ಬರ ಕುಟುಂಬದ 4 ಸದಸ್ಯರು ಕೊರೋನಾಗೆ ಬಲಿ!

ಎರಡು ವಾರಗಳ ಅವಧಿಯಲ್ಲಿ ಕೊರೋನಾದಿಂದಾಗಿ ವಾಯುಪಡೆಯ ಅಧಿಕಾರಿಯೊಬ್ಬರು ಪತ್ನಿ ಮತ್ತು ಮೂವರು ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಅವರ ತಾಯಿ ಮತ್ತು ಇಬ್ಬರು ಮಕ್ಕಳು ಸಹ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

Published: 18th April 2021 08:50 PM  |   Last Updated: 18th April 2021 08:50 PM   |  A+A-


Arun-Gaikwad-Family

ಅರುಣ್ ಗಾಯಕ್ವಾಡ್ ಕುಟುಂಬ

Posted By : Vishwanath S
Source : PTI

ಪುಣೆ: ಎರಡು ವಾರಗಳ ಅವಧಿಯಲ್ಲಿ ಕೊರೋನಾದಿಂದಾಗಿ ವಾಯುಪಡೆಯ ಅಧಿಕಾರಿಯೊಬ್ಬರು ಪತ್ನಿ ಮತ್ತು ಮೂವರು ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಅವರ ತಾಯಿ ಮತ್ತು ಇಬ್ಬರು ಮಕ್ಕಳು ಸಹ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತೀಯ ವಾಯುಪಡೆ ಅಧೀಕ್ಷಕ(ಲಾಜಿಸ್ಟಿಕ್ಸ್) ಅರುಣ್ ಗಾಯಕ್ವಾಡ್ ಅವರು ಕಳೆದ ಜನವರಿಯಲ್ಲಿ ತನ್ನ ಮಾವನನ್ನು ಕಳೆದುಕೊಂಡಿದ್ದರು. ಧನೋರಿಯಲ್ಲಿ ವಾಸಿಸುತ್ತಿದ್ದ ಅರುಣ್ ಅವರ ಹೆಂಡತಿಯ ಕುಟುಂಬ ಮಾರ್ಚ್ 15ರಂದು ಮೃತರ  ಸ್ಮರಣಾರ್ಥ ಪೂಜೆಯನ್ನು ನಡೆಸಿತು. ಪದ್ಧತಿಯ ಪ್ರಕಾರ ಅಳಿಯಂದಿರು ಪೂಜೆ ಮಾಡಬೇಕಿತ್ತು. ನಾನು ಕೂಡ ಅಲ್ಲಿಗೆ ಹೋಗಿದ್ದೆ ಆದರೆ ನಾನು ಮೊದಲೇ ಸ್ಥಳವನ್ನು ತೊರೆದಿದ್ದೇ ಎಂದು ಗೈಕ್ವಾಡ್ ಹೇಳಿದರು.

ಮರುದಿನ, ಅರುಣ್ ಗಾಯಕ್ವಾಡ್ ಅವರ ಭಾವಮೈದ ರೋಹಿತ್ ಜಾಧವ್(38) ಜ್ವರದಿಂದ ಬಳಲುತ್ತಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಜಾಧವ್ ಅವರ ತಾಯಿ ಅಲ್ಕಾ(62) ಮತ್ತು ಹಿರಿಯ ಸಹೋದರ ಅತುಲ್(42)ಗೆ ಸಹ ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು.

ಇನ್ನು ಮಾರ್ಚ್ 28ರಂದು, ನನ್ನ ಪತ್ನಿ 42 ವರ್ಷದ ವೈಶಾಲಿ, ಹೃದಯ ಕಾಯಿಲೆಯಿಂದ ಬಳಲುತ್ತಿದ್ದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರಿಗೆ ಆಮ್ಲಜನಕದ ಅವಶ್ಯಕತೆ ಇದ್ದಿದ್ದರಿಂದ ಅವರನ್ನು ಕತ್ರಜ್‌ನಲ್ಲಿನ ಭಾರತಿ ಆಸ್ಪತ್ರೆಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ  ಕರೆದೊಯ್ದೆ. ಆದರೆ, ಆಸ್ಪತ್ರೆಯ ವೈದ್ಯರು ಅವಳ ರಕ್ತದ ಆಮ್ಲಜನಕದ ಮಟ್ಟವು ಶೇಕಡಾ 70 ರಿಂದ 80 ರವರೆಗೆ ಏರಿಳಿತವಾಗುತ್ತಿರುವುದರಿಂದ ಆಕೆಗೆ ವೆಂಟಿಲೇಟರ್ ಹಾಸಿಗೆ ಬೇಕು ಎಂದು ಹೇಳಿದರು. ನಾನು ವೆಂಟಿಲೇಟರ್ ಹಾಸಿಗೆ ಇರುವ ಆಸ್ಪತ್ರೆಯೊಂದಕ್ಕೆ ಸೇರಿಸಿದೆ. 

ಎರಡು ದಿನ ಚೆನ್ನಾಗಿದ್ದ ಆಕೆ ಮಾರ್ಚ್ 30ರಂದು ಆಕೆ ಪತ್ನಿ ಮೃತಪಟ್ಟಳು. ಏಪ್ರಿಲ್ 3ರಂದು ನನ್ನ ಭಾವಮೈದ, ಏಪ್ರಿಲ್ 4ರಂದು ನನ್ನು ಅತ್ತೆ, ಎಪ್ರಿಲ್ 14ರಂದು ಮತ್ತೋರ್ವ ಭಾವಮೈಧ ಅತುಲ್ ಮೃತಪಟ್ಟರು ಎಂದು ಅರುಣ್ ಗಾಯಕ್ವಾಡ್ ಹೇಳಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp