ಭಾರತದಲ್ಲಿ ಕೋವಿಡ್-19 ಹೆಚ್ಚಳ: ಒಂದೇ ದಿನ 2.73 ಲಕ್ಷ ಜನರಿಗೆ ಕೊರೋನಾ ಸೋಂಕು, 1,619 ಮಂದಿ ಸಾವು

ಭಾರತದಲ್ಲಿ ಮತ್ತೊಮ್ಮೆ ಕೊರೋನಾ ಸೋಂಕಿತರ ಸಂಖ್ಯೆ ಉತ್ತುಂಗಕ್ಕೆ ತಲುಪಿದ್ದು, ನಿನ್ನೆ ಒಂದೇ ದಿನ 2 ಲಕ್ಷದ 73 ಸಾವಿರದ 810 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 1 ಕೋಟಿಯ 50 ಲಕ್ಷದ 61 ಸಾವಿರದ 919ಕ್ಕೆ ಏರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದಲ್ಲಿ ಮತ್ತೊಮ್ಮೆ ಕೊರೋನಾ ಸೋಂಕಿತರ ಸಂಖ್ಯೆ ಉತ್ತುಂಗಕ್ಕೆ ತಲುಪಿದ್ದು, ನಿನ್ನೆ ಒಂದೇ ದಿನ 2 ಲಕ್ಷದ 73 ಸಾವಿರದ 810 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 1 ಕೋಟಿಯ 50 ಲಕ್ಷದ 61 ಸಾವಿರದ 919ಕ್ಕೆ ಏರಿದೆ. 1,619 ಮಂದಿ ನಿನ್ನೆ ಒಂದೇ ದಿನ ಸೋಂಕಿಗೆ ಬಲಿಯಾಗಿದ್ದು, ದೇಶದಲ್ಲಿ ಈವರೆಗೆ ಸೋಂಕಿಗೆ ಒಟ್ಟಾರೆಯಾಗಿ 1 ಲಕ್ಷದ 78 ಸಾವಿರದ 769 ಮಂದಿ ಬಲಿಯಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಸೋಂಕು ಗುಣಮುಖವಾಗಿ ಬಿಡುಗಡೆಯಾದವರ ಸಂಖ್ಯೆ 1 ಲಕ್ಷದ 44 ಸಾವಿರದ 178 ಆಗುವ ಮೂಲಕ ಈವರೆಗೆ 1 ಕೋಟಿಯ 29 ಲಕ್ಷದ 53 ಸಾವಿರದ 821 ಮಂದಿ ಗುಣಮುಖರಾಗಿದ್ದಾರೆ. 

ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಭಾರತದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 19 ಲಕ್ಷ ಗಡಿ ದಾಟಿದೆ. ಕಳೆದ 40 ದಿನಗಳಿಂದ ಸಕ್ರಿಯ ಕೇಸುಗಳು ಏರುಗತಿಯಲ್ಲಿಯೇ ಸಾಗುತ್ತಿದ್ದು, 19 ಲಕ್ಷದ 29 ಸಾವಿರದ 329 ಕೇಸುಗಳಿವೆ.

ದೇಶದಲ್ಲಿ ಒಟ್ಟು 12 ಲಕ್ಷದ 38 ಸಾವಿರದ 52 ಸಾವಿರದ 566 ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ. 

ಕೊರೋನಾ ಪರೀಕ್ಷೆ:  ದೇಶಾದ್ಯಂತ ಇದುವರೆಗೆ 26 ಕೋಟಿ 78 ಲಕ್ಷ 94 ಸಾವಿರದ 549 ಕೋವಿಡ್ ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ - ಐಸಿಎಂಆರ್ ತಿಳಿಸಿದೆ. ನಿನ್ನೆ 13 ಲಕ್ಷ 56 ಸಾವಿರದ 133 ಕೋವಿಡ್ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. 

ಇನ್ನು ಕೋವಿಡ್ ಲಸಿಕೆ ವಿತರಣೆಯಲ್ಲಿ ಭಾರತ ಹೊಸ ದಾಖಲೆಯೊಂದನ್ನು ಸೃಷ್ಟಿಸಿದೆ. ಕೇವಲ 92 ದಿನಗಳಲ್ಲಿ 12 ಕೋಟಿ ಜನರಿಗೆ ಲಸಿಕೆ ನೀಡುವ ಮೂಲಕ ಈ ಸಾಧನೆ ಮಾಡಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಭಾರತ ತನ್ನದಾಗಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com