ಕೋವಿಡ್-19: ಆಸ್ಪತ್ರೆಗಳಿಗೆ ಬಿಬಿಎಂಪಿ ಆಯುಕ್ತರ ಧೀಡಿರ್ ಭೇಟಿ, 5 ಪ್ರಮುಖ ಆಸ್ಪತ್ರೆಗಳಿಗೆ ನೋಟಿಸ್

ಕೋವಿಡ್-19 ಸೋಂಕಿತರಿಗೆ ಬೆಡ್ ಮೀಸಲು ವಿಚಾರವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನ ಐದು ಪ್ರಮುಖ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಆಯುಕ್ತ ಗೌರವ್ ಗುಪ್ತಾ
ಆಸ್ಪತ್ರೆಗೆ ಭೇಟಿ ನೀಡಿದ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು: ಕೋವಿಡ್-19 ಸೋಂಕಿತರಿಗೆ ಬೆಡ್ ಮೀಸಲು ವಿಚಾರವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನ ಐದು ಪ್ರಮುಖ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50‌ರಷ್ಟು ಹಾಸಿಗೆ ಮೀಸಲಿರಿಸಿರುವ ಸಂಬಂಧ ಮುಖ್ಯ ಆಯುಕ್ತ ಗೌರವ್‌ಗುಪ್ತ ಅವರು ಪ್ರಮುಖ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು  ಕ್ರಮೇಣ ಏರಿಕೆಯಾಗುತ್ತಿದ್ದು, ಸರ್ಕಾರದ ಆದೇಶದಂತೆ ಸೋಂಕಿತರ ಚಿಕಿತ್ಸೆಗಾಗಿ ಶೇ. 50 ರಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆಯೇ, ಇಲ್ಲವೇ ಎಂಬುದನ್ನು ತಿಳಿಯಲು ಆಯುಕ್ತರು ರವರು ಇಂದು ವಿಕ್ರಂ, ಪೋರ್ಟಿಸ್, ಆಸ್ಟರ್ ಸಿಎಂಐ, ಕೊಲಂಬಿಯಾ ಏಷಿಯಾ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆ ಭೇಟಿ ನೀಡಿ  ಪರಿಶೀಲನೆ ನಡೆಸಿದರು. ಈ ವೇಳೆ ಯಾವ ಆಸ್ಪತ್ರೆಯಲ್ಲೂ ಶೇ. 50 ಹಾಸಿಗೆಗಳನ್ನು ಮೀಸಲಿಡದ ಕಾರಣ 5 ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟೀಸ್ ನೀಡಿ 24 ಗಂಟೆಯೊಳಗಾಗಿ ಉತ್ತರ ನೀಡುವಂತೆ ತಿಳಿಸಲಾಗಿದೆ. ಅಂತೆಯೇ ಹಾಸಿಗೆ ನೀಡದಿದ್ದರೆ ಕೆಪಿಎಂಇ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಸೂಚನೆ  ನೀಡಲಾಗಿದೆ.

ತಪಾಸಣೆ ಮುಗಿಸಿದ ನಂತರ ಮಾನ್ಯ ಮುಖ್ಯ ಆಯುಕ್ತರು ರವರು ಮಾತನಾಡುತ್ತಾ ಆಸ್ಪತ್ರೆಗಳು ವ್ಯವಸ್ಥೆಯನ್ನು ಜರೂರಾಗಿ 24 ತಾಸಿನ ಒಳಗೆ ಸರಿಪಡಿಸಿ ಕೊಳ್ಳುವಂತೆ ಇಲ್ಕದಿದ್ದರೆ ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಹಾಗೂ ಅಧಿಕಾರಿಗಳು ಸಹ ಈ ಬಗ್ಗೆಜರೂರು  ಕ್ರಮವಹಿಸಲು ಸೂಚಿಸಲಾಗಿದೆ. ಅಲ್ಲದೇ ಇಂದು ಸಾಂಕೇತಿಕವಾಗಿ 5 ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಲಾಗಿದೆ, ಮುಂದಿನ ದಿನದಲ್ಲಿ ಧೀಡರ್ ಆಗಿ ಯಾವುದೇ ಆಸ್ಪತ್ರೆಗೆ ಅನೀರಿಕ್ಷಿತವಾಗಿ ತಪಾಸಣೆ ನೀಡಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ. ಆಯುಕ್ತರ ಭೇಟಿ ವೇಳೆ ವಲಯ  ಆಯುಕ್ತರು‌ ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಯಾವ ಆಸ್ಪತ್ರೆ ಎಷ್ಟು ಬೆಡ್ ಗಳನ್ನು ಮೀಸಲಿಡಬೇಕು?
ವಿಕ್ರಂ ಆಸ್ಪತ್ರೆಯಲ್ಲಿ 39 ಹಾಗೂ ಪೋರ್ಟಿಸ್ ಆಸ್ಪತ್ರೆಯಲ್ಲಿ 30 ಹಾಸಿಗೆಗಳು ಮೀಸಲಿಡಬೇಕಿರುತ್ತದೆ. ಅಂತೆಯೇ ಆಸ್ಟರ್ ಆಸ್ಪತ್ರೆಯಲ್ಲಿ 112 ಹಾಸಿಗೆಗಳನ್ನು ಮೀಸಲಿಡಬೇಕಿದ್ದು, ಈ ಆಸ್ಪತ್ರೆ ಆಡಳಿತ ಮಂಡಳಿ ಶೇ.20 ರಂತೆ ಸಾಮಾನ್ಯ, ಐಸಿಯು, ವೆಂಟಿಲೇಟರ್ ಸೇರಿ 45 ಹಾಸಿಗೆಗಳನ್ನು ಮಾತ್ರ ಮೀಸಲಿಟ್ಟಿದೆ  ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂತೆಯೇ ಬಳ್ಳಾರಿ ರಸ್ತೆಯಲ್ಲಿರುವ ಕೋಲಂಬಿಯಾ ಏಷಿಯಾ ಆಸ್ಪತ್ರೆ 15 ಹಾಸಿಗೆ ಮಾತ್ರ ಮೀಸಲಿಟ್ಟಿದ್ದು, ಆದೇಶದ ಪ್ರಕಾರ 30 ಹಾಸಿಗೆ ಮೀಸಲಿಡಬೇಕಿರುತ್ತದೆ. ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆ 124 ಹಾಸಿಗೆಗಳ ಪೈಕಿ 63 ಹಾಸಿಗೆಗಳನ್ನು ಮಾತ್ರ ಮೀಸಲಿಟ್ಟಿದ್ದು, ಈ ಬಗ್ಗೆ ಕಾರಣ ಕೇಳಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com