ಚೀನಾ ಜತೆ ಸರ್ಕಾರದ ವ್ಯರ್ಥ ಮಾತುಕತೆ, ರಾಷ್ಟ್ರೀಯ ಭದ್ರತೆಗೆ ಅಪಾಯ: ರಾಹುಲ್ ಗಾಂಧಿ

ಕೇಂದ್ರ ಸರ್ಕಾರ ಚೀನಾದೊಂದಿಗೆ ನಡೆಸಿರುವ ಮಾತುಕತೆ ‘ವ್ಯರ್ಥ’ ಎಂದಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಿದೆ ಎಂದು ಸೋಮವಾರ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರ ಚೀನಾದೊಂದಿಗೆ ನಡೆಸಿರುವ ಮಾತುಕತೆ ‘ವ್ಯರ್ಥ’ ಎಂದಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಿದೆ ಎಂದು ಸೋಮವಾರ ಆರೋಪಿಸಿದ್ದಾರೆ.

ಪೂರ್ವ ಲಡಾಖ್‌ನ ಹಾಟ್‌ ಸ್ಪ್ರಿಂಗ್ಸ್‌, ಗೊಗ್ರಾ ಮತ್ತು ಡೆಪಸಾಂಗ್‌ ಪ್ರದೇಶಗಳಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ನಿರಾಕರಿಸಿರುವ ಕುರಿತು ವರದಿಗಳು ಪ್ರಕಟವಾಗಿದ್ದನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್‌ ಮಾಡಿದ್ದಾರೆ.

‘ಗೊಗ್ರಾ-ಹಾಟ್ ಸ್ಪ್ರಿಂಗ್ಸ್ ಮತ್ತು ಡೆಪ್ಸಾಂಗ್ ಭೂ ಪ್ರದೇಶಗಳಲ್ಲಿ ಚೀನಾ ಆಕ್ರಮಣ ಮುಂದುವರಿದಿದೆ. ಇದು  ಡಿಬಿಒ ವಾಯುನೆಲೆ ಸೇರಿದಂತೆ ಭಾರತದ ರಕ್ಷಣಾ ಕಾರ್ಯತಂತ್ರದ ಹಿತಾಸಕ್ತಿಗೆ ಎದುರಾದ ನೇರ ಅಪಾಯವಾಗಿದೆ‘ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆಯಷ್ಟೇ ಕಾಂಗ್ರೆಸ್, ಪೂರ್ವ ಲಡಾಖ್‌ನ ಇತರ ಪ್ರದೇಶಗಳಲ್ಲಿ ನಡೆದಿರುವ ಸಂಘರ್ಷವನ್ನು ತಡೆಯವಲ್ಲಿ ಚೀನಾದೊಂದಿಗೆ ನಡೆದ ಮಾತುಕತೆಗಳು ಏಕೆ ‘ಫಲಿತಾಂಶ ನೀಡಿಲ್ಲ‘ ಎಂದು ಪ್ರಶ್ನಿಸಿತ್ತು.

ಚೀನಾ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಬಗ್ಗೆ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ, ಕಾಂಗ್ರೆಸ್ ಹಿರಿಯ ವಕ್ತಾರ ಅಜಯ್ ಮಾಕೆನ್ ಅವರು, ಈ ವಿಷಯದ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಬೇಕೆಂದು ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com