ಕೊರೋನಾದಿಂದ ಸಾವನ್ನಪ್ಪಿದ 5 ವೈದ್ಯರಲ್ಲಿ ಒಬ್ಬರಿಗೆ ಮಾತ್ರ ಕೇಂದ್ರದಿಂದ 50 ಲಕ್ಷ ರೂ.ವಿಮೆ!

ಭಾರತದಲ್ಲಿ ಈವರೆಗೆ ಕೋವಿಡ್-19 ಕರ್ತವ್ಯದ ವೇಳೆ ಕನಿಷ್ಠ 756 ವೈದ್ಯರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಈ ಪೈಕಿ ಕೇವಲ 168 ವೈದ್ಯರ ಕುಟುಂಬಗಳು ಮಾತ್ರ ಕೇಂದ್ರ ಸರ್ಕಾರದ 50 ಲಕ್ಷ ರೂ. ವಿಮೆ ಪಡೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದಲ್ಲಿ ಈವರೆಗೆ ಕೋವಿಡ್ -19 ಕರ್ತವ್ಯದ ವೇಳೆ ಕನಿಷ್ಠ 756 ವೈದ್ಯರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಈ ಪೈಕಿ ಕೇವಲ 168 ವೈದ್ಯರ ಕುಟುಂಬಗಳು ಮಾತ್ರ ಕೇಂದ್ರ ಸರ್ಕಾರದ 50 ಲಕ್ಷ ರೂ. ವಿಮೆ ಪಡೆದುಕೊಂಡಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಂಕಿ ಅಂಶಗಳು ತಿಳಿಸಿವೆ.

ಇದರ ಅರ್ಥವೇನೆಂದರೆ, ಸಾಂಕ್ರಾಮಿಕ ಕಾಯಿಲೆಗೆ ತುತ್ತಾದ ಪ್ರತಿ ಐದು ವೈದ್ಯರಲ್ಲಿ ಒಬ್ಬರು ಮಾತ್ರ ವಿಮೆ ಹಣ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಸುಮಾರು 22 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಈ ವಿಮಾ ಯೋಜನೆ ಘೋಷಿಸಲಾಗಿತ್ತು.

ಕೇವಲ 238 ಆರೋಗ್ಯ ಸಿಬ್ಬಂದಿ ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ವೈದ್ಯರನ್ನು ಹೊರತುಪಡಿಸಿ ಇತರ ವರ್ಗಗಳಲ್ಲಿ ಕೇವಲ 137 ಆರೋಗ್ಯ ಕಾರ್ಯಕರ್ತರು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಂಕಿ ಅಂಶಗಳು ಸೂಚಿಸುತ್ತವೆ.

ಕೋವಿಡ್-19 ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟ ವೈದ್ಯರು ಅಥವಾ ಇತರ ಆರೋಗ್ಯ ಕಾರ್ಯಕರ್ತರ ಮಾಹಿತಿ ತನ್ನ ಬಳಿ ಇಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com