ಕೋವಿಡ್-19: ಎರಡೂ ಅಲೆಗಳಲ್ಲಿ ಶೇ.70 ರಷ್ಟು ರೋಗಿಗಳು 40 ವರ್ಷಕ್ಕಿಂತ ಮೇಲ್ಪಟ್ಟವರು, ವೃದ್ಧರಿಗೂ ಅಪಾಯ ತಪ್ಪಿದ್ದಲ್ಲ!

ಕೋವಿಡ್-19  ಎರಡು ಅಲೆಗಳಲ್ಲೂ ಶೇ. 70 ಕ್ಕೂ ಹೆಚ್ಚು ರೋಗಿಗಳು 40 ವರ್ಷಕ್ಕೂ ಮೇಲ್ಪಟ್ಟವರಾಗಿದ್ದಾರೆ. ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುತ್ತಿರುವುದು ಮುಂದುವರೆದಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್-19 ಎರಡು ಅಲೆಗಳಲ್ಲೂ ಶೇ. 70 ಕ್ಕೂ ಹೆಚ್ಚು ರೋಗಿಗಳು 40 ವರ್ಷಕ್ಕೂ ಮೇಲ್ಪಟ್ಟವರಾಗಿದ್ದಾರೆ. ಹಿರಿಯ ನಾಗರಿಕರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುತ್ತಿರುವುದು ಮುಂದುವರೆದಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಎಂಆರ್ ನಿರ್ದೇಶಕ ಜನರಲ್ ಬಲರಾಂ ಭಾರ್ಗವ, ಆಸ್ಪತ್ರೆಯಲ್ಲಿದ್ದು ಸಾವನ್ನಪ್ಪಿದ್ದ ರೋಗಿಗಳಲ್ಲಿ ಮೊದಲು ಹಾಗೂ ಎರಡನೇ ಅಲೆಯ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಎರಡನೇ ಅಲೆಯಲ್ಲಿ ಆಕ್ಸಿಜನ್ ಅಗತ್ಯತೆ ಹೆಚ್ಚಾಗಿದ್ದರೆ, ವೆಂಟಿಲೇಟರ್ ಅಗತ್ಯತೆ ಹೆಚ್ಚಾಗಿಲ್ಲ ಎಂದರು.

ಮೊದಲ ಅಲೆಯಲ್ಲಿ ಗಂಟಲು ಕೆರೆತ, ಒಣಕೆಮ್ಮು, ಮತ್ತಿತರ ಲಕ್ಷಣಗಳು ಹೆಚ್ಚಾಗಿರುತ್ತಿದ್ದವು. ಆದರೆ, ಎರಡನೇ ಅಲೆಯಲ್ಲಿ ಉಸಿರಾಟದ ಸಮಸ್ಯೆಯ ಹೆಚ್ಚಾಗಿ ಕಂಡುಬರುತ್ತಿದೆ. ಆಸ್ಪತ್ರೆಯಲ್ಲಿದ್ದು ಸಾವನ್ನಪ್ಪಿದ್ದ ರೋಗಿಗಳ ಪೈಕಿ ಮೊದಲು ಹಾಗೂ ಎರಡನೇ ಅಲೆಯ ನಡುವೆ ಯಾವುದೇ ವ್ಯತ್ಯಾಸ್ಯ ಕಂಡುಬಂದಿಲ್ಲ ಎಂದು ಹೇಳಿದರು.

ಮೊದಲ ಅಲೆಯಲ್ಲಿ ಶೇ. 41. 5 ರಷ್ಟು ಮಂದಿಗಿಗೆ ಆಕ್ಸಿಜನ್ ಅಗತ್ಯತೆ ಇತ್ತು. ಎರಡನೇ ಅಲೆಯಲ್ಲಿ ಶೇ. 54.5 ರಷ್ಟು ರೋಗಿಗಳಿಗೆ ಆಕ್ಸಿಜನ್ ಅಗತ್ಯವಿದೆ. ಶೇ. 70 ರಷ್ಟು ರೋಗಿಗಳು 40 ವರ್ಷಕ್ಕೂ ಮೇಲ್ಪಟ್ಟವರಾಗಿದ್ದಾರೆ. ಎರಡನೇ ಅಲೆಯಲ್ಲಿ ರೋಗ ಲಕ್ಷಣ ರಹಿತರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು.

ಮೊದಲ ಅಲೆಯಲ್ಲಿ ಶೇ.31 ರಷ್ಟು ರೋಗಿಗಳು 30 ವರ್ಷಕ್ಕಿಂತ ಕಡಿಮೆ ವಯಸ್ಸಿವರಾಗಿದ್ದರು. ಈ ವೇಳೆ ಅದು ಶೇ.32 ಆಗಿದೆ ಎಂದು ನೀತಿ ಆಯೋಗದ ಸದಸ್ಯ ವಿಕೆ ಪೌಲ್ ಹೇಳಿದರು. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ರೆಮಿಡಿಸಿವಿರ್ ಚುಚ್ಚುಮದ್ದುನ್ನು ಅಗತ್ಯವಾಗಿ ಬಳಸಬೇಕು, ಆದರೆ, ಮನೆಯಲ್ಲಿರುವ ರೋಗಿಗಳಿಗೆ ಇದನ್ನು ಬಳಸಬಾರದು ಎಂದು ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com