ಕೋವಿಡ್-19: ವೈದ್ಯರು, ಫಾರ್ಮಾ ಕಂಪನಿಗಳೊಂದಿಗೆ ಪ್ರಧಾನಿ ಸಂವಾದ

2 ನೇ ಅಲೆಯಲ್ಲಿ ಕೋವಿಡ್-19 ಸೋಂಕು ದೇಶಾದ್ಯಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು, ಫಾರ್ಮಾ ಕಂಪನಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: 2 ನೇ ಅಲೆಯಲ್ಲಿ ಕೋವಿಡ್-19 ಸೋಂಕು ದೇಶಾದ್ಯಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು, ಫಾರ್ಮಾ ಕಂಪನಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ. 

ಸಂಜೆ 4.30 ಕ್ಕೆ ದೇಶಾದ್ಯಂತ ಮುಂಚೂಣಿಯಲ್ಲಿರುವ ವೈದ್ಯರೊಂದಿಗೆ ಮೋದಿ ಚರ್ಚೆ ನಡೆಸಲಿದ್ದಾರೆ.  ಈ ಬಳಿಕ ಸಂಜೆ 6 ಕ್ಕೆ ಫಾರ್ಮಾ ಸಂಸ್ಥೆಗಳೊಂದಿಗೆ ಕೊರೋನಾ ಪರಿಸ್ಥಿತಿಯ ಬಗ್ಗೆ ಸಂವಾದ ನಡೆಸಲಿದ್ದಾರೆ. ಏ.19 ರಂದು ಪ್ರಧಾನಿ ನರೇಂದ್ರ ಮೋದಿ ಬೆಳಿಗ್ಗೆ 11:30 ರಿಂದ ಮಹತ್ವದ ಸಭೆಗಳನ್ನು ನಡೆಸಿದರು. 

ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆತಂಕಕಾರಿ ಪರಿಸ್ಥಿತಿಯನ್ನು ನಿಭಾಯಿಸುವುದರ ಸಂಬಂಧ ಪ್ರಧಾನಿ ಮೋದಿ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com