ಕೋವಿಡ್-19 ಲಸಿಕೆ ಕುರಿತು ಹೇಳಿಕೆ: ನಟ ಮನ್ಸೂರ್ ಅಲಿಖಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ದಾಖಲು 

ಕೋವಿಡ್ -19 ಲಸಿಕೆ ವಿರುದ್ಧ ಹೇಳಿಕೆ ಹಿನ್ನೆಲೆಯಲ್ಲಿ ತಮಿಳು ನಟ ಮನ್ಸೂರ್ ಅಲಿಖಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚೆನ್ನೈ ನಗರ ಪೊಲೀಸ್ ಆಯುಕ್ತರಿಗೆ ದೂರನ್ನು ಸಲ್ಲಿಸಲಾಗಿದೆ.
ನಟ ಮನ್ಸೂರ್ ಅಲಿಖಾನ್
ನಟ ಮನ್ಸೂರ್ ಅಲಿಖಾನ್

ಚೆನ್ನೈ: ಕೋವಿಡ್ -19 ಲಸಿಕೆ ವಿರುದ್ಧ ಹೇಳಿಕೆ ಹಿನ್ನೆಲೆಯಲ್ಲಿ ತಮಿಳು ನಟ ಮನ್ಸೂರ್ ಅಲಿಖಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚೆನ್ನೈ ನಗರ ಪೊಲೀಸ್ ಆಯುಕ್ತರಿಗೆ ದೂರನ್ನು ಸಲ್ಲಿಸಲಾಗಿದೆ.

ಶನಿವಾರ ದೂರನ್ನು ಸ್ವೀಕರಿಸಲಾಗಿದ್ದು,  ದಕ್ಷಿಣ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ವರ್ಗಾಯಿಸಲಾಗಿದೆ. ಅದು ಅವರ ವ್ಯಾಪ್ತಿಯಲ್ಲಿ ಬರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ನಟ ವಿವೇಕ್ ದಾಖಲಾಗಿದ್ದ ಆಸ್ಪತ್ರೆ ಮುಂಭಾಗ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಲಿಖಾನ್, ಲಸಿಕೆಯ ಅಂಶಗಳ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದರಲ್ಲದೇ,  ಜನರನ್ನು ಹಾದಿತಪ್ಪಿಸಲಾಗುತ್ತಿದೆ ಎಂದು  ಆರೋಗ್ಯ ಕಾರ್ಯದರ್ಶಿಯನ್ನು ದೂಷಿಸಿದ್ದರು. 

ಕೋವಿಡ್- 19 ಲಸಿಕೆಯನ್ನು ತೆಗೆದುಕೊಳ್ಳುವಂತೆ ಸರ್ಕಾರ ಒತ್ತಾಯಿಸುತ್ತಿದೆ. ಒಂದು ವೇಳೆ ವಿವೇಕ್ ಲಸಿಕೆ ತೆಗೆದುಕೊಳ್ಳದಿದ್ದರೆ ಬದುಕುತ್ತಿದ್ದರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬೀದಿ ಬೀದಿಗಳಲ್ಲಿ ಓಡಾಡಿದ್ದೇನೆ. ಭಿಕ್ಷುಕರೊಂದಿಗೆ ಆಹಾರ ಹಂಚಿಕೊಂಡಿದ್ದೇನೆ. ನನಗೆ ಸೋಂಕು ತಗುಲಿಲ್ಲ. ಮಾಸ್ಕ್ ನ್ನು ಸರ್ಕಾರ ಕಡ್ಡಾಯಗೊಳಿಸಬಾರದು ಎಂದು ಮನ್ಸೂರ್ ಅಲಿಖಾನ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com