39 ಸಿಬ್ಬಂದಿಗೆ ಕೊರೋನಾ ಪಾಸಿಟಿವ್, ಚೆನ್ನೈನ ಸರವಣ ಸ್ಟೋರ್ಸ್ ಬಂದ್

ಚೆನ್ನೈನ ಪುರಸವಾಕಂನಲ್ಲಿರುವ ಸರವಣ ಸ್ಟೋರ್ಸ್ ನ ಒಟ್ಟು 39 ಕೆಲಸಗಾರರಿಗೆ ಕೋವಿಡ್-19 ಗೆ ಪಾಸಿಟಿವ್ ದೃಢಪಟ್ಟಿದ್ದು, ಅಂಗಡಿ ಬಂದ್ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಚೆನ್ನೈನ ಪುರಸವಾಕಂನಲ್ಲಿರುವ ಸರವಣ ಸ್ಟೋರ್ಸ್ ನ ಒಟ್ಟು 39 ಕೆಲಸಗಾರರಿಗೆ ಕೋವಿಡ್-19 ಗೆ ಪಾಸಿಟಿವ್ ದೃಢಪಟ್ಟಿದ್ದು, ಅಂಗಡಿ ಬಂದ್ ಮಾಡಲಾಗಿದೆ.

ಕರಿಯಪ್ಪ ಬೀದಿಯಲ್ಲಿರುವ ಗೃಹೋಪಯೋಗಿ ಉಪಕರಣಗಳ ಅಂಗಡಿಯನ್ನು ಬಂದ್ ಮಾಡಲಾಗಿದ್ದು, ರಸ್ತೆಯ ಎರಡೂ ತುದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

ಪ್ರಕರಣಗಳು ಅಂಗಡಿಯ ನಿಲಯದಿಂದ ಬಂದವು ಆದರೆ ಎರಡೂ ಒಂದೇ ಕಟ್ಟಡದಲ್ಲಿರುವುದರಿಂದ ಅಂಗಡಿಯನ್ನು ಸಹ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಾರ್ಮಿಟರಿಯ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಆದರೆ ಎರಡೂ ಒಂದೇ ಕಟ್ಟಡದಲ್ಲಿರುವುದರಿಂದ ಸ್ಟೋರ್ ಅನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ತೆಗೆದುಕೊಂಡ 166 ಮಂದಿಯ ಸ್ವ್ಯಾಬ್‌ಗಳಲ್ಲಿ 13 ಮಂದಿಗೆ ಪಾಸಿಟಿವ್ ಬಂದಿದೆ. ಶನಿವಾರ ತೆಗೆದಕೊಂಡ 159 ಸ್ವ್ಯಾಬ್‌ಗಳಲ್ಲಿ 26 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

“ಎಲ್ಲಾ ಉದ್ಯೋಗಿಗಳು ಯುವಕರಾಗಿದ್ದು, ಕೆಲವರನ್ನು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಕೆಲವರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದಾರೆ. ಅವರು ಲಕ್ಷಣರಹಿತರಾಗಿದ್ದಾರೆ ಮತ್ತು ನಾವು ಅವರ ಮೇಲ್ವಿಚಾರಣೆ ಮಾಡುತ್ತಿದ್ದೇವೆ ”ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com