ಏ.11 ರ ವರೆಗೂ ರಾಜ್ಯಗಳಿಂದ ಶೇ.23 ರಷ್ಟು ಲಸಿಕೆ ಪೋಲು!

ಒಂದೆಡೆ ಲಸಿಕೆಗಳಿಗೆ ಕೊರತೆ ಉಂಟಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಉತ್ಪಾದನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ ಏ.11 ರವರೆಗೂ ರಾಜ್ಯಗಳಿಂದ ಶೇ.23 ರಷ್ಟು ಲಸಿಕೆ ಪೋಲಾಗಿದೆ ಎಂಬ ಮಾಹಿತಿ ಆರ್ ಟಿಐ ನಿಂದ ಲಭ್ಯವಾಗಿದೆ. 
ಲಸಿಕೆ ಅಭಿಯಾನ
ಲಸಿಕೆ ಅಭಿಯಾನ

ನವದೆಹಲಿ: ಒಂದೆಡೆ ಲಸಿಕೆಗಳಿಗೆ ಕೊರತೆ ಉಂಟಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಉತ್ಪಾದನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ ಏ.11 ರವರೆಗೂ ರಾಜ್ಯಗಳಿಂದ ಶೇ.23 ರಷ್ಟು ಲಸಿಕೆ ಪೋಲಾಗಿದೆ ಎಂಬ ಮಾಹಿತಿ ಆರ್ ಟಿಐ ನಿಂದ ಲಭ್ಯವಾಗಿದೆ. 

ಎನ್ ಡಿಟಿವಿಯಲ್ಲಿ ವರದಿಯಾಗಿರುವ ಪ್ರಕಾರ 10.34 ಕೋಟಿ ಡೋಸ್ ಲಸಿಕೆಗಳ ಪೈಕಿ ಒಟ್ಟಾರೆ 44.28 ಲಕ್ಷ ಲಸಿಕೆ ಡೋಸ್ ಗಳು ಏ.11 ರವರೆಗೂ ವಿವಿಧ ರಾಜ್ಯಗಳಲ್ಲಿ ಪೋಲಾಗಿದೆ. 

ತಮಿಳುನಾಡು, ಹರ್ಯಾಣ, ಪಂಜಾಬ್, ಮಣಿಪುರ, ತೆಲಂಗಾಣಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೋಲಾಗಿದೆ ಎಂದು ಆರ್ ಟಿಐ ಮಾಹಿತಿ ಹೇಳಿದೆ. ಕೇರಳ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಿಜೋರಾಮ್, ಗೋವಾ, ದಾಮನ್, ಡಿಯು, ಅಂಡಮಾನ್ ನಿಕೋಬಾರ್ ದ್ವೀಪ, ಲಕ್ಷದ್ವೀಪಗಳಲ್ಲಿ ಶೂನ್ಯ ಪ್ರಮಾಣದಲ್ಲಿ ಲಸಿಕೆ ಪೋಲಾಗಿದೆ ಎಂಬುದು ಸಮಾಧಾನಕರ ಮಾಹಿತಿಯಾಗಿದೆ. ಭಾರತ ಈ ವರೆಗೂ 12.69 ಕೋಟಿ ಕೋವಿಡ್-19 ಲಸಿಕೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com