'ಸಿಎಪಿಎಫ್‌ನಲ್ಲಿ ದಂಗೆಯನ್ನು ಪ್ರಚೋದಿಸುವ ಹೇಳಿಕೆ': ಮಮತಾ ವಿರುದ್ಧ ಕ್ರಮಕೈ ಬಿಜೆಪಿ ಆಗ್ರಹ

ವಿಧಾನಸಭಾ ಚುನಾವಣೆಗೆ ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾಗಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸಿಬ್ಬಂದಿಗಳಲ್ಲಿ "ದಂಗೆ" ಯನ್ನು ಉಂಟುಮಾಡುವ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನೀಡುತ್ತಿದ್ದಾರೆ ಎಂದು ಬಿಜೆಪಿ ಸೋಮವಾರ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ವಿಧಾನಸಭಾ ಚುನಾವಣೆಗೆ ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾಗಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸಿಬ್ಬಂದಿಗಳಲ್ಲಿ "ದಂಗೆ" ಯನ್ನು ಉಂಟುಮಾಡುವ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನೀಡುತ್ತಿದ್ದಾರೆ ಎಂದು ಬಿಜೆಪಿ ಸೋಮವಾರ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದೆ.

ಸೋಮವಾರ ಸ್ಥಳೀಯ ದಿನಪತ್ರಿಕೆಯಲ್ಲಿ ಪ್ರಕಟವಾದಂತೆ ಬ್ಯಾನರ್ಜಿ ಅವರು ತಮ್ಮ ಅಭಿಪ್ರಾಯದ ಮೂಲಕ ಮಾದರಿ ನೀತಿ ಸಂಹಿತೆಯ (ಎಂಸಿಸಿ) ನಿಬಂಧನೆಗಳನ್ನು ಸಹ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ ಬಿಜೆಪಿ, ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರೆ ನೀಡಿತು.

ನಾಡಿಯಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ "ಬಿಜೆಪಿಯ ಆದೇಶದ ಮೇರೆಗೆ ಗುಂಡು ಹೊಡೆಯಬೇಡಿ. ಅವರು ಇಂದು ಇದ್ದಾರೆ ಆದರೆ ನಾಳೆ ಉಳಿಯುವುದಿಲ್ಲ" ಎಂದು ಸಿಎಪಿಎಫ್ ಸಿಬ್ಬಂದಿಗೆ ಹೇಳಿದ್ದಾರೆ. ಸಿಇಒಗೆ ನೀಡಿದ ದೂರಿನಲ್ಲಿ, ಕೇಸರಿ ಪಕ್ಷವು ಈ ಹೇಳಿಕೆಯು ಚುನಾವಣಾ ಆಯೋಗದ ಅಧಿಕಾರವನ್ನು ಕೆಣಕುವಂತಿದೆ ಎಂದು ಆರೋಪಿಸಿದೆ.

"ಚುನಾವಣಾ ಕರ್ತವ್ಯದ ಸಮಯದಲ್ಲಿ ಸಿಎಪಿಎಫ್ ಸಿಬ್ಬಂದಿ ಆಯೋಗದ ಒಟ್ಟಾರೆ ಮೇಲ್ವಿಚಾರಣೆಯಲ್ಲಿಯೇ ಇರುತ್ತಾರೆ ಮತ್ತು ಅವರ ಉನ್ನತ ಅಧಿಕಾರಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ" ಎಂದು ಬಿಜೆಪಿ ಹೇಳಿದೆ, ಚುನಾವಣೆಯಲ್ಲಿ ಮಧ್ಯಸ್ಥಗಾರರಾಗಿರುವ ರಾಜಕೀಯ ಪಕ್ಷಗಳಿಗೆ ನಿಯೋಜಿಸಲಾದ ಪಡೆಗಳಿಗೆ ಯಾವ ಆದೇಶ ನೀಡುವ ಅಧಿಕಾರವಿಲ್ಲ ಇದು ಹಿಮ್ಮುಖವಾಗಿ ದಂಗೆಗೆ ಪ್ರಚೋದನೆಯಾಗಿದೆ" ಎಂದು ಬ್ಯಾನರ್ಜಿ ಅವರ ಹೇಳಿಕೆಯ ಮೇಲೆ ಬಿಜೆಪಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಏಪ್ರಿಲ್ 10 ರಂದು ಮತದಾನದ ಸಂದರ್ಭದಲ್ಲಿ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಸಿಎಪಿಎಫ್ ನಡೆಸಿದ ಗುಂಡಿನ ದಾಳಿಯನ್ನು ಉಲ್ಲೇಖಿಸಿ ಬ್ಯಾನರ್ಜಿ ಭಾನುವಾರ ಈ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ, "ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಮತ್ತು ಜನರ ಪ್ರತಿನಿಧಿ ಕಾಯ್ದೆ 1951 ರ ನಿಯಮಗಳನ್ನು ಇದು ಉಲ್ಲಂಘಿಸಿದೆ." ನಾಲ್ಕನೇ ಹಂತದ ಮತದಾನದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಕೇಂದ್ರ ಪಡೆಗಳ ವಿರುದ್ಧದ ಹೇಳಿಕೆಗಳು ಮತ್ತು "ಧಾರ್ಮಿಕ ಉಚ್ಚಾರಣೆಗಳನ್ನು" ಹೊಂದಿರುವ ಹೇಳಿಕೆ ಕುರಿತು ಚುನಾವಣಾ ಆಯೋಗವು ಕಳೆದ ವಾರ 24 ಗಂಟೆಗಳ ಕಾಲ ಬ್ಯಾನರ್ಜಿ ಅವರಿಗೆ ಪ್ರಚಾರ ನಿಷೇಧ ವಿಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com