ಉದ್ಯಮಿ ಮುಕೇಶ್ ಅಂಬಾನಿಯ ರಿಲಯನ್ಸ್ ನಿಂದ 700 ಟನ್ ಆಕ್ಸಿಜನ್ ತಯಾರಿಕೆ 

ಕೋವಿಡ್-19 ತೀವ್ರ ಬಾಧಿತ ರಾಜ್ಯಗಳಿಗೆ ಉಚಿತವಾಗಿ ವೈದ್ಯಕೀಯ ಆಕ್ಸಿಜನ್ ಪೂರೈಸುವುದಕ್ಕಾಗಿ ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದಿನವೊಂದಕ್ಕೆ ಸುಮಾರು 700 ಟನ್ ಆಕ್ಸಿಜನ್ ತಯಾರಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ

ಮುಂಬೈ: ಕೋವಿಡ್-19 ತೀವ್ರ ಬಾಧಿತ ರಾಜ್ಯಗಳಿಗೆ ಉಚಿತವಾಗಿ ವೈದ್ಯಕೀಯ ಆಕ್ಸಿಜನ್ ಪೂರೈಸುವುದಕ್ಕಾಗಿ ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದಿನವೊಂದಕ್ಕೆ ಸುಮಾರು 700 ಟನ್ ಆಕ್ಸಿಜನ್ ತಯಾರಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಜಾಮ್ ನಗರದಲ್ಲಿರುವ ತೈಲ ಸಂಸ್ಕರಣಾ ಘಟಕದಿಂದ ಆರಂಭಿಕವಾಗಿ 100 ಟನ್ ವೈದ್ಯಕೀಯ ಆಕ್ಸಿಜನ್ ತಯಾರಿಸಲಾಗುತಿತ್ತು.  ಇದನ್ನು ಕ್ಷೀಪ್ರಗತಿಯಲ್ಲಿ ಸುಮಾರು 700 ಟನ್ ಗಳಿಗೆ ಹೆಚ್ಚಿಸಲಾಗಿದೆ. ಜನರಿಗೂ ಈ ವಿಷಯ ಗೊತ್ತಿದೆ ಎಂದು ಹೇಳಲಾಗಿದೆ. 

ಗುಜರಾತ್. ಮಹಾರಾಷ್ಟ್ರ, ಮಧ್ಯಪ್ರದೇಶದಂತಹ ರಾಜ್ಯಗಳಿಗೆ ಆಕ್ಸಿಜನ್ ಪೂರೈಸುವುದರಿಂದ ಪ್ರತಿದಿನ  ಸುಮಾರು 70 ಸಾವಿರ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ನೆರವಾಗಲಿದೆ. ವೈದ್ಯಕೀಯ ಗ್ರೇಡ್ ಆಕ್ಸಿಜನ್ ಉತ್ಪಾದನೆ ಸಾಮರ್ಥ್ಯವನ್ನು 1 ಸಾವಿರ ಟನ್ ಗಳಿಗೆ ಹೆಚ್ಚಿಸಲು ಕಂಪನಿ ಯೋಜಿಸಿರುವುದಾಗಿ ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com