ದೇಶದಲ್ಲಿ ಕೊರೋನಾ ಸ್ಫೋಟ: ನಾಳೆಯಿಂದ ಸುಪ್ರೀಂ ಕೋರ್ಟ್ ನಲ್ಲಿ ತುರ್ತು ವಿಚಾರಣೆ ಮಾತ್ರ! 

ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರ ಮಧ್ಯೆ ನಾಳೆಯಿಂದ ತುರ್ತು ವಿಚಾರಣೆಗಳನ್ನು ಮಾತ್ರ ಸುಪ್ರೀಂ ಕೋರ್ಟ್ ನಲ್ಲಿ ನಡೆಸಲಾಗುವುದು ಎಂದು ಹೇಳಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರ ಮಧ್ಯೆ ನಾಳೆಯಿಂದ ತುರ್ತು ವಿಚಾರಣೆಗಳನ್ನು ಮಾತ್ರ ಸುಪ್ರೀಂ ಕೋರ್ಟ್ ನಲ್ಲಿ ನಡೆಸಲಾಗುವುದು ಎಂದು ಹೇಳಿದೆ.

ಸರ್ಕಾರ ಕಳೆದ ವರ್ಷ ಜುಲೈ 4ರಂದು ಹೊರಡಿಸಿದ್ದ ಕೋವಿಡ್ ಶಿಷ್ಠಾಚಾರಗಳನ್ನು ಅನುಸರಿಸಿಕೊಂಡು ಮತ್ತು ಅದಕ್ಕೆ ಮೊದಲು ಹೊರಡಿಸಿದ್ದ ಸುತ್ತೋಲೆಯಂತೆ ನಾಳೆಯಿಂದ ತುರ್ತು ವಿಚಾರಣೆಗಳನ್ನು ಮಾತ್ರ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸುತ್ತೋಲೆಯಲ್ಲಿ ಹೇಳಿದೆ.

ದೇಶದಲ್ಲಿ ಪ್ರಸ್ತುತ ಇರುವ ಕೋವಿಡ್ ಸ್ಥಿತಿಗತಿಯ ಹಿನ್ನೆಲೆಯಲ್ಲಿ ಯಾವುದೇ ತೀವ್ರ ತುರ್ತು ಸಂದರ್ಭದಲ್ಲಿ, ಬಾಕಿ ಇರುವ ವಿಷಯಗಳಲ್ಲಿ ವಿನಂತಿಯನ್ನು ಈಗಾಗಲೇ ಸೂಚಿಸಲಾದ ಗೊತ್ತುಪಡಿಸಿದ ಲಿಂಕ್‌ನಲ್ಲಿ ಮಾಡಬಹುದು, ”ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 25 ಸಾವಿರದ 500 ಹೊಸ ಕೊರೋನಾ ಕೇಸುಗಳು ದಾಖಲಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com