ದೆಹಲಿಯಲ್ಲಿ ಆಮ್ಲಜನಕದ ತೀವ್ರ ಬಿಕ್ಕಟ್ಟು: ಸಿಎಂ ಅರವಿಂದ್ ಕೇಜ್ರಿವಾಲ್

ನಗರದ ಕೆಲವು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳ ವೈದ್ಯಕೀಯ ಆಮ್ಲಜನಕ ಉಳಿದಿರುವ ಕಾರಣ ತಕ್ಷಣವೇ ಆಮ್ಲಜನಕವನ್ನು ಪೂರೈಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ನಗರದ ಕೆಲವು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳ ವೈದ್ಯಕೀಯ ಆಮ್ಲಜನಕ ಉಳಿದಿರುವ ಕಾರಣ ತಕ್ಷಣವೇ ಆಮ್ಲಜನಕವನ್ನು ಪೂರೈಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

‘ದೆಹಲಿಯಲ್ಲಿ ಆಮ್ಲಜನಕದ ಗಂಭೀರ ಸಮಸ್ಯೆ ಎದುರಾಗಿದೆ. ದೆಹಲಿಗೆ ತುರ್ತಾಗಿ ಆಮ್ಲಜನಕವನ್ನು ಒದಗಿಸುವಂತೆ ಮತ್ತೆ ಕೇಂದ್ರವನ್ನು ಒತ್ತಾಯಿಸುತ್ತಿದ್ದೇನೆ. ಕೆಲ ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳವರೆಗೆ ಮಾತ್ರ ಆಮ್ಲಜನಕ ಪೂರೈಕೆಯಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು. 

ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಕೇವಲ 6000 ಕ್ಯೂಬಿಕ್ ಮೀಟರ್ ಆಕ್ಸಿಜನ್ ಉಳಿದಿದ್ದು ಇದು ನಾಳೆ ಬೆಳಗ್ಗೆ 1 ಗಂಟೆಯವರೆಗೆ ಮಾತ್ರ ಬಳಕೆಯಾಗಲಿದೆ. ಕೂಡಲೇ ರಾಷ್ಟ್ರರಾಜಧಾನಿಗೆ ಆಕ್ಸಿಜನ್ ಅಗತ್ಯವಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com