ಉತ್ತರ ಪ್ರದೇಶದಲ್ಲಿ 10 ಸಾವಿರ ಗಡಿ ದಾಟಿದ ಕೋವಿಡ್ ಸಾವಿನ ಸಂಖ್ಯೆ: ರಾಜ್ಯದ ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್ ಕೊರತೆ

ಉತ್ತರ ಪ್ರದೇಶ ರಾಜ್ಯದಲ್ಲಿ ಕೋವಿಡ್-19ಗೆ ಮೃತಪಟ್ಟವರ ಸಂಖ್ಯೆ 10 ಸಾವಿರದ ಗಡಿ ದಾಟಿದ್ದು ನಿನ್ನೆ ಒಂದೇ ದಿನ 162 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಒಂದೇ ದಿನ 29 ಸಾವಿರದ 754 ಹೊಸ ಕೇಸುಗಳು ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಕೋವಿಡ್ ಸೋಂಕಿತರ ಕುಟುಂಬ ಸದಸ್ಯರು ಆಕ್ಸಿಜನ್ ತುಂಬಿದ ಸಿಲೆಂಡರ್ ಗಾಗಿ ಕಾಯುತ್ತಿರುವುದು
ಕೋವಿಡ್ ಸೋಂಕಿತರ ಕುಟುಂಬ ಸದಸ್ಯರು ಆಕ್ಸಿಜನ್ ತುಂಬಿದ ಸಿಲೆಂಡರ್ ಗಾಗಿ ಕಾಯುತ್ತಿರುವುದು

ಲಕ್ನೊ: ಉತ್ತರ ಪ್ರದೇಶ ರಾಜ್ಯದಲ್ಲಿ ಕೋವಿಡ್-19ಗೆ ಮೃತಪಟ್ಟವರ ಸಂಖ್ಯೆ 10 ಸಾವಿರದ ಗಡಿ ದಾಟಿದ್ದು ನಿನ್ನೆ ಒಂದೇ ದಿನ 162 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಒಂದೇ ದಿನ 29 ಸಾವಿರದ 754 ಹೊಸ ಕೇಸುಗಳು ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಮೊನ್ನೆ ಸೋಮವಾರ ಉತ್ತರ ಪ್ರದೇಶದಲ್ಲಿ 167 ಹೊಸ ಕೊರೋನಾ ಕೇಸುಗಳು ವರದಿಯಾಗಿದ್ದರೆ ಇದುವೆರೆಗೆ ದಿನದಲ್ಲಿ ವರದಿಯಾದ ಅತಿಹೆಚ್ಚು ಸಾವಿನ ಪ್ರಕರಣವಾಗಿದೆ, ಕಳೆದ ಭಾನುವಾರ 30 ಸಾವಿರದ 596 ಹೊಸ ಕೊರೋನಾ ಕೇಸುಗಳು ಪತ್ತೆಯಾಗಿವೆ.

ಉತ್ತರ ಪ್ರದೇಶದಲ್ಲಿ ನಿನ್ನೆ ಕೊರೋನಾಗೆ ಗುಣಮುಖರಾದವರ ಸಂಖ್ಯೆ 6 ಲಕ್ಷದ 75 ಸಾವಿರದ 702 ಆಗಿದ್ದು, 14 ಸಾವಿರದ 391 ಮಂದಿ ರೋಗಿಗಳು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ತಿಳಿಸಿದ್ದಾರೆ.

ಇಂದು ರಾಜ್ಯದಲ್ಲಿ ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 2 ಲಕ್ಷದ 23 ಸಾವಿರದ 544 ಇದೆ. ಹೊಸ ಸಾವುನೋವುಗಳು ಮತ್ತು ಪ್ರಕರಣಗಳು ರಾಜ್ಯದಲ್ಲಿ ಸಾವಿನ ಸಂಖ್ಯೆಯನ್ನು 10,159 ಕ್ಕೆ ಮತ್ತು ಸೋಂಕಿನ ಸಂಖ್ಯೆಯನ್ನು 9,09,405 ಕ್ಕೆ ತಳ್ಳಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಹೊಸ ಪ್ರಕರಣಗಳಲ್ಲಿ ಲಖನೌದಲ್ಲಿ ಗರಿಷ್ಠ 5,014, ಅಲಹಾಬಾದ್‌ನಲ್ಲಿ 2,175, ಕಾನ್ಪುರದಲ್ಲಿ 1740, ವಾರಣಾಸಿಯಲ್ಲಿ 1,637, ಮೀರತ್‌ನಲ್ಲಿ 1,287, ಬರೇಲಿಯಲ್ಲಿ 913, ಗೌತಮ್ ಬುದ್ಧ ನಗರದಲ್ಲಿ 640 ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಕ್ಸಿಜನ್, ಬೆಡ್ ಗಳ ಕೊರತೆಯುಂಟಾಗಿದೆ ಎಂದು ಜಿಲ್ಲಾಡಳಿತಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com