'ಒಂದು ರಾಷ್ಟ್ರ, ಒಂದು ಪಕ್ಷ, ಒಬ್ಬ ನಾಯಕ' ಎಂದು ಜಪಿಸುವ ಬಿಜೆಪಿ, ಜೀವ ಉಳಿಸುವ ಲಸಿಕೆಗೆ ಒಂದೇ ದರ ಏಕಿಲ್ಲ?: ಮಮತಾ

ಕೊರೋನಾ ಲಸಿಕೆಯ ದರ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರತಿ ಖರೀದಿದಾರರಿಗೂ ಒಂದೇ ರೀತಿಯ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. 
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೋಲ್ಕತಾ: ಕೊರೋನಾ ಲಸಿಕೆಯ ದರ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರತಿ ಖರೀದಿದಾರರಿಗೂ ಒಂದೇ ರೀತಿಯ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. 

'ಒಂದು ರಾಷ್ಟ್ರ, ಒಂದು ಪಕ್ಷ, ಒಬ್ಬ ನಾಯಕ' ಎಂದು ಬಿಜೆಪಿ ಎಲ್ಲಾ ವಯಸ್ಸಿನವರಿಗೂ ಸೇರಿದಂತೆ ಪ್ರತಿಯೊಬ್ಬ ಭಾರತೀಯರಿಗೂ ಅವರ ಸ್ಥಳವನ್ನು ಲೆಕ್ಕಿಸದೆ ಉಚಿತವಾಗಿ ಲಸಿಕೆ ನೀಡಬೇಕು ದೀದಿ ಹೇಳಿದ್ದಾರೆ.

"ಸದಾ ಒಂದು ರಾಷ್ಟ್ರ, ಒಂದು ಪಕ್ಷ, ಒಬ್ಬ ನಾಯಕ ಎಂದು ಜಪಿಸುವ ಬಿಜೆಪಿ ಜೀವ ಉಳಿಸುವ ಕೊರೋನಾ ಲಸಿಕೆಗೆ ಒಂದೇ ಬೆಲೆ ಇರಬೇಕು ಅಂತ ಏಕೆ ಹೇಳುತ್ತಿಲ್ಲ. ವಯಸ್ಸು, ಜಾತಿ, ಮತ, ಸ್ಥಳವನ್ನು ಲೆಕ್ಕಿಸದೆ ಪ್ರತಿಯೊಬ್ಬ ಭಾರತೀಯನಿಗೂ ಉಚಿತ ಲಸಿಕೆ ನೀಡಬೇಕು. ಕೇಂದ್ರ ಸರ್ಕಾರ ಕೇಂದ್ರ ಅಥವಾ ರಾಜ್ಯಗಳಿಗೆ ಯಾರು ಪಾವತಿಸುತ್ತಾರೆ ಎಂಬುದನ್ನು ಲೆಕ್ಕಿಸದೆ ಕೋವಿಡ್ ಲಸಿಕೆಗೆ ಒಂದೇ ಬೆಲೆ ನಿಗದಿ ಮಾಡಬೇಕು" ಎಂದು ಟಿಎಂಸಿ ಮುಖ್ಯಸ್ಥೆ ಟ್ವೀಟ್ ಮಾಡಿದ್ದಾರೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಲಸಿಕೆ 'ಕೋವಿಶೀಲ್ಡ್' ಗೆ ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್‌ಗೆ 600 ರೂ. ದರ ನಿಗದಿಪಡಿಸಲಾಗಿದೆ ಎಂದು ಬುಧವಾರ ಪ್ರಕಟಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com