ಏಪ್ರಿಲ್ 25 ರಿಂದ ಮೇ 3 ರವರೆಗೆ  ಭಾರತದಿಂದ ವಿಮಾನಗಳ ಹಾರಾಟ ನಿರ್ಬಂಧಿಸಿದ ಯುಎಇ

ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವಂತೆಯೇ,  ಏಪ್ರಿಲ್ 25 ರಿಂದ ಮೇ 3 ರವರೆಗೆ  ಭಾರತದಿಂದ ವಿಮಾನಗಳ ಹಾರಾಟವನ್ನು ರದ್ದುಪಡಿಸುವುದಾಗಿ ಯುಎಇ ಗುರುವಾರ ಪ್ರಕಟಿಸಿದೆ.

Published: 22nd April 2021 08:43 PM  |   Last Updated: 22nd April 2021 08:43 PM   |  A+A-


Emirates1

ಸಾಂದರ್ಭಿಕ ಚಿತ್ರ

Posted By : Nagaraja AB
Source : PTI

ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವಂತೆಯೇ,  ಏಪ್ರಿಲ್ 25 ರಿಂದ ಮೇ 3 ರವರೆಗೆ  ಭಾರತದಿಂದ ವಿಮಾನಗಳ ಹಾರಾಟವನ್ನು ರದ್ದುಪಡಿಸುವುದಾಗಿ ಯುಎಇ ಗುರುವಾರ ಪ್ರಕಟಿಸಿದೆ.

ಭಾರತದಿಂದ ಪ್ರಯಾಣಿಕರು ಬೇರೆ ರಾಷ್ಟ್ರಗಳ ಮೂಲಕ ಯುಎಇ ಪ್ರವೇಶಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಪ್ರಯಾಣಿಕರು ಇತರೆ ರಾಷ್ಟ್ರಗಳಲ್ಲಿ 14 ದಿನಗಳ ವಾಸ್ತವ್ಯ ಹೂಡಿದ್ದರೆ, ತದನಂತರದಲ್ಲಿ ಯುಎಇ ಪ್ರವೇಶಕ್ಕೆ ಅವಕಾಶ ಸಿಗಲಿದೆ.

ಉಭಯ ರಾಷ್ಟ್ರಗಳ ನಡುವೆ ಕಾರ್ಗೊ ವಿಮಾನಗಳು ಹಾಗೂ ಯುಎಇನಿಂದ ಭಾರತಕ್ಕೆ ಬಂದಿಳಿಯುವ ವಿಮಾನಗಳ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ.


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp