ಸಣ್ಣ ಪ್ರಮಾಣದಲ್ಲಿ ಕೋವಿಡ್ ಲಕ್ಷಣ ಕಂಡುಬಂದರೆ ಪರೀಕ್ಷೆ ಮಾಡಿಸಿಕೊಂಡು ಮನೆಯಲ್ಲಿಯೇ ಐಸೊಲೇಟ್ ಆಗಿ: ತಜ್ಞರ ಸಲಹೆ 

ದೇಶದಲ್ಲಿ ಕೊರೋನಾ ತಾಂಡವವಾಡುತ್ತಿರುವಾಗ ಸೋಷಿಯಲ್ ಮೀಡಿಯಾಗಳಲ್ಲಿ ಸೋಂಕು, ಅನುಸರಿಸಬೇಕಾದ ಕ್ರಮಗಳು, ಶಿಷ್ಟಾಚಾರಗಳು, ಚಿಕಿತ್ಸೆ ಬಗ್ಗೆ ಸಾಕಷ್ಟು ಮಾಹಿತಿಗಳು, ವಿಷಯಗಳು ಹರಿದಾಡುತ್ತಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಕೊರೋನಾ ತಾಂಡವವಾಡುತ್ತಿರುವಾಗ ಸೋಷಿಯಲ್ ಮೀಡಿಯಾಗಳಲ್ಲಿ ಸೋಂಕು, ಅನುಸರಿಸಬೇಕಾದ ಕ್ರಮಗಳು, ಶಿಷ್ಟಾಚಾರಗಳು, ಚಿಕಿತ್ಸೆ ಬಗ್ಗೆ ಸಾಕಷ್ಟು ಮಾಹಿತಿಗಳು, ವಿಷಯಗಳು ಹರಿದಾಡುತ್ತಿವೆ.

ದೇಶದ ಅನೇಕ ರಾಜ್ಯಗಳಲ್ಲಿ ಮಹಾನಗರಗಳಲ್ಲಿ ಆಸ್ಪತ್ರೆ ಬೆಡ್ ಮತ್ತು ಆಕ್ಸಿಜನ್ ಕೊರತೆಯುಂಟಾಗಿದೆ. ಈ ಸಂದರ್ಭದಲ್ಲಿ ಸೋಂಕು ತಗುಲಿದ ತಕ್ಷಣ ಆಸ್ಪತ್ರೆಗೆ ಹೋಗಿ ದಾಖಲಾಗಬೇಕಿಲ್ಲ. ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಸೂಕ್ತ ಸೂಚನೆಗಳನ್ನು ಪಾಲಿಸಿದರೆ ಗುಣಮುಖರಾಗಬಹುದು ಎಂದು ವೈದ್ಯರು ಹೇಳುತ್ತಾರೆ.

ವೆಲ್ಲೂರ್‌ನ ಸಿಎಮ್‌ಸಿಯ ವೈರಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಜಾಕೋಬ್ ಜಾನ್ ಮತ್ತು ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಬೆಂಗಳೂರಿನ ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಪ್ರಾಧ್ಯಾಪಕ ಡಾ.ಗಿರಿಧರ ಆರ್ ಬಾಬು ಅವರು ಕೊರೋನಾ ಸೋಂಕಿನಿಂದ ಸುರಕ್ಷಿತವಾಗಿರಲು ರೋಗಲಕ್ಷಣ ಹೊಂದಿರುವವರು ಯಾವ ರೀತಿ ಜಾಗ್ರತೆ ವಹಿಸಬೇಕೆಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ.

ಕೊರೋನಾ ಬಂದಾಗ ಮನೆಯಲ್ಲಿದ್ದು ಕ್ವಾರಂಟೈನ್ ಆಗಬೇಕೆ ಅಥವಾ ಆಸ್ಪತ್ರೆಗೆ ದಾಖಲಾಗಬೇಕೆ ಎಂದು ಹೇಗೆ ನಿರ್ಧರಿಸುವುದು ಎಂದು ಕೇಳಿದರೆ ಡಾ ಜಾನ್ ಹೇಳುವುದು ಹೀಗೆ: ಕೊರೋನಾದ ಪ್ಯಾರಮೀಟರ್ ಒಂದನೇ ಅಲೆಗೂ ಎರಡನೇ ಅಲೆಗೂ ಹೆಚ್ಚು ವ್ಯತ್ಯಾಸವಿಲ್ಲ. ಗಂಟಲು ತುರಿಕೆ, ಕೆಮ್ಮು, ಜ್ವರ, ಮೂಗಿನಲ್ಲಿ ಸೋರಿಕೆ, ತಲೆನೋವು, ಆಹಾರ ಪದಾರ್ಥದ ವಾಸನೆ ಕಳೆದುಕೊಳ್ಳುವುದು ಇವೆಲ್ಲ ಕೋವಿಡ್-19 ಸೋಂಕಿನ ಲಕ್ಷಣ. ಹೀಗೆ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಕೋವಿಡ್ ಪಾಸಿಟಿವ್ ಬಂದರೆ ಮನೆಯಲ್ಲಿಯೇ ಐಸೊಲೇಟ್ ಆಗಿ ಇರಿ.

ಇನ್ನು ಡಾ ಬಾಬು ಅವರು, ವ್ಯಕ್ತಿಯು ಮೊದಲು ಪ್ರಾಯೋಗಿಕವಾಗಿ ಸದೃಢವಾಗಿರಬೇಕು ಮತ್ತು ರೋಗಲಕ್ಷಣ ಇಲ್ಲದಿದ್ದರೆ, 100.4 ಡಿಗ್ರಿಗಿಂತ ಕಡಿಮೆ ಸೌಮ್ಯ ಜ್ವರ ಮತ್ತು 95ಕ್ಕಿಂತ ಹೆಚ್ಚಿನ ಆಮ್ಲಜನಕ ಮಟ್ಟವಿರಬೇಕು. ಸರಿಯಾದ ಕ್ಲಿನಿಕಲ್ ಮೌಲ್ಯಮಾಪನದ ನಂತರ ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗಗಳು, ದೀರ್ಘಕಾಲದ ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ ಕಾಯಿಲೆ, ಸೆರೆಬ್ರೊವಾಸ್ಕುಲರ್ ಕಾಯಿಲೆ ಮುಂತಾದ ಕೊಮೊರ್ಬಿಡಿಟಿ ಹೊಂದಿರುವ ಹಿರಿಯ ನಾಗರಿಕರು ಪ್ರತ್ಯೇಕ ಕೋಣೆಯಲ್ಲಿ ಇರಬೇಕು.

ಮನೆಯಲ್ಲಿಯೇ ಐಸೊಲೇಟ್ ಆಗಿರಲು ಸೂಕ್ತ ಸೌಲಭ್ಯ ಮನೆಯಲ್ಲಿರಬೇಕು. ಕೊರೋನಾ ಸೋಂಕಿತರಿಗೆ ಹಗಲು ರಾತ್ರಿ 24 ಗಂಟೆ ನಿಗಾ ವಹಿಸಬೇಕಾಗುತ್ತದೆ.

ಮನೆಯಲ್ಲಿಯೇ ಐಸೊಲೇಟ್ ಆಗಿದ್ದರೆ ಏನೇನು ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂಬುದಕ್ಕೆ ಡಾ ಜಾನ್, ನಿರಂತರ ವೈದ್ಯರೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿರಿ. ಸಾಕಷ್ಟು ದ್ರವ ಪದಾರ್ಥಗಳನ್ನು ಸೇವಿಸಿ ವಿಶ್ರಾಂತಿ ಪಡೆಯಿರಿ. ಪಲ್ಸ್ ಆಕ್ಸಿಮೀಟರ್ ಖರೀದಿಸಿ ದೇಹದ ಉಷ್ಣಾಂಶ ಪರೀಕ್ಷಿಸುತ್ತಿರಿ. ಆಕ್ಸಿಜನ್ ಮಟ್ಟ 95ಕ್ಕಿಂತ  ಹೆಚ್ಚಿದ್ದರೆ ಗಾಬರಿಗೊಳ್ಳುವ ಅಗತ್ಯವಿಲ್ಲ.

ಡಾ ಬಾಬು ಅವರು, ಸೂಚಿಸಲಾದ ಔಷಧಿ 3 ದಿನಗಳವರೆಗೆ ಟ್ಯಾಬ್ಲೆಟ್ ಐವರ್ಮೆಕ್ಟಿನ್ 12 ಮಿಗ್ರಾಂ ಅಥವಾ ದಿನ 1 ರಂದು ಟ್ಯಾಬ್ಲೆಟ್ ಫಾವಿಪಿರವಿರ್ 1800 ಮಿಗ್ರಾಂ (200 ಮಿಗ್ರಾಂ × 9) ಬಳಸಬೇಕು ಎಂದು ಸಲಹೆ ನೀಡುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com