ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ.11ಕ್ಕೆ ಹೆಚ್ಚಳ- ಎಸ್ ಅಂಡ್ ಪಿ ಅಂದಾಜು

ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆ ಶೇ. 11 ರಷ್ಟು ಇರಲಿದೆ ಎಂದು ಎಸ್ ಅಂಡ್ ಪಿ ಜಾಗತಿಕ ರೇಟಿಂಗ್ ಸಂಸ್ಥೆ ಗುರುವಾರ ಅಂದಾಜಿಸಿದೆ. ಆದರೆ, ವ್ಯಾಪಕ ಲಾಕ್ ಡೌನ್ ನಿಂದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆ ಶೇ. 11 ರಷ್ಟು ಇರಲಿದೆ ಎಂದು ಎಸ್ ಅಂಡ್ ಪಿ ಜಾಗತಿಕ ರೇಟಿಂಗ್ ಸಂಸ್ಥೆ ಗುರುವಾರ ಅಂದಾಜಿಸಿದೆ. ಆದರೆ, ವ್ಯಾಪಕ ಲಾಕ್ ಡೌನ್ ನಿಂದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹೇಳಿದೆ.

ಕೋವಿಡ್-19 ಆರ್ಥಿಕತೆಗೆ ಪ್ರಮುಖ ಅಪಾಯಕಾರಿಯಾಗಿದೆ ಎಂದು ಏಷಿಯಾ- ಫೆಸಿಪಿಕ್ ಹಣಕಾಸು ಸಂಸ್ಥೆ ಎಸ್ ಅಂಡ್ ಪಿ ತನ್ನ ವರದಿಯಲ್ಲಿ ತಿಳಿಸಿದೆ.

ಇತ್ತೀಚಿನ ವಾರಗಳಲ್ಲಿ ಹೊಸ ಸೋಂಕು ಪ್ರಕರಣ ಹೆಚ್ಚಾಗುತ್ತಿದ್ದು, ದೇಶ ಕೋವಿಡ್- 19 ಸಾಂಕ್ರಾಮಿಕದ ಎರಡನೇ ಅಲೆಯ ಮಧ್ಯದಲ್ಲಿದೆ.  ಈ ವರ್ಷದಲ್ಲಿ ನಮ್ಮ ಆರ್ಥಿಕತೆ ಶೇ, 11 ರಷ್ಟಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಶೇ 6.1 ರಿಂದ ಶೇ. 6. 4 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಕೆಲ ಕಡೆಗಳಲ್ಲಿ ಭಾಗಶ: ಲಾಕ್ ಡೌನ್ ಜಾರಿಯಾಗಿದ್ದು, ಇನ್ನೂ ಹೆಚ್ಚಿನ ರೀತಿಯ  ಲಾಕ್ ಡೌನ್ ಅಗತ್ಯವಿದೆ. ವ್ಯಾಪಕ ಲಾಕ್ ಡೌನ್ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಧಿಕೃತ ಅಂದಾಜುಗಳ ಪ್ರಕಾರ, ಈ ವರ್ಷದ ಮಾರ್ಚ್ 31ಕ್ಕೆ ಅಂತ್ಯಗೊಳ್ಳುವ 2020-21 ನೇ ಸಾಲಿನ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆ ಶೇ.8 ರಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com