ಲಡಾಖ್: ಸೇನೆಯಿಂದ ಹಿಮಪಾತದಲ್ಲಿ ಸಿಲುಕಿದ್ದ ಎಂಟು ನಾಗರಿಕರ ರಕ್ಷಣೆ 

ಲಡಾಖ್ ಪ್ರದೇಶದ ಖಾರ್ದುಂಗ್ ಲಾ ಪ್ರದೇಶದಲ್ಲಿ ಭಾರಿ ಹಿಮಪಾತದಲ್ಲಿ ಸಿಲುಕಿದ್ದ ಎಂಟು ನಾಗರಿಕರನ್ನು ಸೇನೆಯು ರಕ್ಷಿಸಿದೆ ಎಂದು ರಕ್ಷಣಾ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿ
ಭದ್ರತಾ ಸಿಬ್ಬಂದಿ

ಶ್ರೀನಗರ: ಲಡಾಖ್ ಪ್ರದೇಶದ ಖಾರ್ದುಂಗ್ ಲಾ ಪ್ರದೇಶದಲ್ಲಿ ಭಾರಿ ಹಿಮಪಾತದಲ್ಲಿ ಸಿಲುಕಿದ್ದ ಎಂಟು ನಾಗರಿಕರನ್ನು ಸೇನೆಯು ರಕ್ಷಿಸಿದೆ ಎಂದು ರಕ್ಷಣಾ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ.

ಉತ್ತರ ಪುಲ್ಲು - ಖಾರ್ದುಂಗ್ ಲಾ ಟಾಪ್ - ದಕ್ಷಿಣ ಪುಲ್ಲು ಮಾರ್ಗದಲ್ಲಿ ಹಿಮಪಾತದಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿ ಖಾರ್ದುಂಗ್ ಲಾ ಟಾಪ್ ಮತ್ತು ಉತ್ತರ ಪುಲ್ಲು  ಬಳಿ  ನಾಗರಿಕ ವಾಹನಗಳು ಸಿಕ್ಕಿ ಹಾಕಿಕೊಂಡಿದ್ದವು. ಕೂಡಲೇ ಸಿಯಾಚಿನ್ ಬ್ರಿಗೇಡ್ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾಗಿ ವಕ್ತಾರರು ಹೇಳಿದ್ದಾರೆ. 

"ಉತ್ತರ ಪುಲ್ಲುವಿನಿಂದ ಖಾರ್ದುಂಗ್ ಲಾ ಟಾಪ್ ಕಡೆಗೆ ಐದು ಕಿಲೋಮೀಟರ್ ದೂರದಲ್ಲಿ, ಮೂರು ವಾಹನಗಳು ಹಿಮಪಾತದಲ್ಲಿ ಸಿಲುಕಿಕೊಂಡಿತ್ತು. ಒಂದು ವಾಹನ ಪಲ್ಟಿಯಾಗಿತ್ತು. ರಕ್ಷಣಾ ತಂಡದೊಂದಿಗೆ ಭಾರತೀಯ ಸೇನೆ ಸೇರಿದಂತೆ ಹಿಮವನ್ನು ತೆರವುಗೊಳಿಸಿದ್ದು, ಅಲ್ಲಿದ್ದ ಎಂಟು ಮಂದಿ ನಾಗರಿಕರನ್ನು ರಕ್ಷಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಉತ್ತರ ಪುಲ್ಲುವಿನಲ್ಲಿ ರಕ್ಷಿಸಲ್ಪಟ್ಟ ಜನರ ಆರೋಗ್ಯ ನಿಯತಾಂಕಗಳನ್ನು ಪರಿಶೀಲಿಸಿದ ನಂತರ, ಹತ್ತಿರದ ಖಾರ್ಡುಂಗ್ ಗ್ರಾಮದ ಕೆಲವರನ್ನು ಅವರ ಮನೆಗೆ ಕಳುಹಿಸಲಾಯಿತು. ಉಳಿದವರಿಗೆ ಖಲ್ಸರ್‌ನಲ್ಲಿ ವಸತಿ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com