ಕೋವಿಡ್-19: ಆಕ್ಸಿಜನ್ ನಿಯೋಜನೆಗಾಗಿ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಮಾರಕ ಕೊರೋನಾ ವೈರಸ್ ಸೋಂಕು ಪ್ರಮಾಣ ಹೆಚ್ಚಳವಾಗಿರುವಂತೆಯೇ ಕೇಂದ್ರ ಸರ್ಕಾರ ಆಕ್ಸಿಜನ್ ಸರಬರಾಜು ಮತ್ತು ನಿಯೋಜನೆಗಾಗಿ ಸಮಿತಿ ರಚನೆ ಮಾಡಿದೆ.
ಆಕ್ಸಿಜನ್ ನಿರ್ವಹಣೆಗಾಗಿ ಸಮಿತಿ
ಆಕ್ಸಿಜನ್ ನಿರ್ವಹಣೆಗಾಗಿ ಸಮಿತಿ

ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕು ಪ್ರಮಾಣ ಹೆಚ್ಚಳವಾಗಿರುವಂತೆಯೇ ಕೇಂದ್ರ ಸರ್ಕಾರ ಆಕ್ಸಿಜನ್ ಸರಬರಾಜು ಮತ್ತು ನಿಯೋಜನೆಗಾಗಿ ಸಮಿತಿ ರಚನೆ ಮಾಡಿದೆ.

ಹೌದು.. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ನಡೆದ 11 ರಾಜ್ಯಗಳ ಸಿಎಂಗಳು ಕೋವಿಡ್-19 ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಕೇಂದ್ರಸರ್ಕಾರದಿಂದ ಆಮ್ಲಜನಕ ಹಂಚಿಕೆಯಾದ ಕೂಡಲೇ, ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಅಗತ್ಯವಿರುವಂತೆ  ಆಮ್ಲಜನಕವನ್ನು ತಲುಪಿಸಲು ಈ ಸಮನ್ವಯ ಸಮಿತಿಯು ನೆರವಾಗಲಿದೆ ಎನ್ನಲಾಗಿದೆ. 

ಸಭೆಯಲ್ಲಿ ಆಕ್ಸಿಜನ್ ಟ್ಯಾಂಕರ್‌ಗಳ ಪ್ರಯಾಣದ ಸಮಯ ಮತ್ತು ವಹಿವಾಟು ಸಮಯವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ಆಯ್ಕೆಗಳ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ. ಇದಕ್ಕಾಗಿ ರೈಲ್ವೆ ಇಲಾಖೆ ಕೂಡ ಆಕ್ಸಿಜನ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸಿದ್ದು, ಒಂದು  ಮಾರ್ಗದ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಖಾಲಿ ಆಕ್ಸಿಜನ್ ಟ್ಯಾಂಕರ್‌ಗಳನ್ನು ಸಹ ವಾಯುಪಡೆಯಿಂದ ಸಾಗಿಸಲಾಗುತ್ತಿದೆ. ಅಲ್ಲದೆ 23 ಮೊಬೈಲ್ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಜರ್ಮನಿಯಿಂದ ವಿಮಾನದಲ್ಲಿ ಭಾರತಕ್ಕೆ ಸಾಗಿಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. 

ಕೋವಿಡ್-19 ರೋಗಿಗಳಿಗೆ ಪೂರೈಸುವ ಎಎಫ್‌ಎಂಎಸ್ ಆಸ್ಪತ್ರೆಗಳಲ್ಲಿ ಇವುಗಳನ್ನು ನಿಯೋಜಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದ್ದು, ಆಮ್ಲಜನಕ ಉತ್ಪಾದಿಸುವ ಪ್ಲಾಂಟ್ ಗಳು ಒಂದು ವಾರದೊಳಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com