ಬೆಂಕಿಹೊತ್ತಿಕೊಂಡ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ನಿದ್ರಿಸುತ್ತಿದ್ದರು: ದುರಂತದ ಬಗ್ಗೆ ಪ್ರತ್ಯಕ್ಷದರ್ಶಿಗಳ ಮಾಹಿತಿ

ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಆಸ್ಪತ್ರೆ ಸಿಬ್ಬಂದಿ ನಿದ್ರಿಸುತ್ತಿದ್ದರು ಎಂದು ಸಂತ್ರಸ್ತರ ಸಂಬಂಧಿಕರು ತಿಳಿಸಿದ್ದಾರೆ
ಮೃತರ ಸಂಬಂಧಿಕರ ರೋಧನ
ಮೃತರ ಸಂಬಂಧಿಕರ ರೋಧನ

ಮುಂಬಯಿ: ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಆಸ್ಪತ್ರೆ ಸಿಬ್ಬಂದಿ ನಿದ್ರಿಸುತ್ತಿದ್ದರು ಎಂದು ಸಂತ್ರಸ್ತರ ಸಂಬಂಧಿಕರು ತಿಳಿಸಿದ್ದಾರೆ,

ಮಹಾರಾಷ್ಟ್ರದ ಪಾಲ್ಗಾರ್ ನ ವಿಜಯ ವಲ್ಲಭ್ ಕೋವಿಡ್ ಆಸ್ಪತ್ರೆಯಲ್ಲಿ ಹೊತ್ತಿಕೊಂಡ ಬೆಂಕಿಯಲ್ಲಿ 14 ಮಂದಿ ಸಜೀವ ದಹನವಾಗಿದ್ದರು. ಆಸ್ಪತ್ರೆಯಲ್ಲಿ ಬೆಂಕಿ ಹತ್ತಿಕೊಂಡಾಗ ಐಸಿಯುನಲ್ಲಿದ್ದ ರೋಗಿಗಳನ್ನು ಹೊರಗೆ ತರಲು ಯಾರೋಬ್ಬರು ಇರಲಿಲ್ಲ ಎಂದು ಹೇಳಿದ್ದಾರೆ.

ಘಟನೆ ನಡೆದ ನಂತರ ಮೃತ ರೋಗಿಗಳ ಸಂಬಂಧಿಕರು ಆಸ್ಪತ್ರೆ ಹೊರಗೆ ಜಮಾಯಿಸಿದ್ದರು. ಇದಕ್ಕೆಲ್ಲಾ ಆಸ್ಪತ್ರೆ ಆಡಳಿತವೇ ಹೊಣೆಗಾರಿಕೆ, ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಆಸ್ಪತ್ರೆ, ಸಿಬ್ಬಂದಿ ನಿದ್ರಿಸುತ್ತಿದ್ದರು. ಐಸಿಯು ನಲ್ಲಿ ಒಬ್ಬರೇ ಒಬ್ಬ ಸಿಬ್ಬಂದಿ ಇರಲಿಲ್ಲ, ಹೀಗಾಗಿ ಐಸಿಯು ನಲ್ಲಿದ್ದ ರೋಗಿಗಳನ್ನು ಹೊರಗೆ ಕರೆ ತರಲು ಸಾಧ್ಯವಾಗಲಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ಬೆಂಕಿ ಅನಾಹುತದಿಂದ ರಕ್ಷಿಸಲು ಕನಿಷ್ಠ ಸಾಧನಗಳು ಇರಲಿಲ್ಲ, ಕನಿಷ್ಠ ಸೌಲಭ್ಯ ಹೊಂದಲಾಗದ ಮೇಲೆ ಆಸ್ಪತ್ರೆ ಏಕೆ ಸ್ಥಾಪಿಸಬೇಕು ಎಂದು ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಹಿಳಾ ವೈದ್ಯೆಯೊಬ್ಬರ ತಾಯಿಯೂ ಕೂಡ ದುರಂತದಲ್ಲಿ ಸಾವನ್ನಪ್ಪಿದ್ದಾರೆ, ಸುರಕ್ಷತಾ ಸಾಧನಗಳಿದ್ದರೇ ನನ್ನ ತಾಯಿ ಬದುಕುತ್ತಿದ್ದರು ಎಂದು ಅಳಲು ತೋಡಿಕೊಂಡಿದ್ದಾರೆ. ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೇಂದು ಮತ್ತೊಬ್ಬ ರೋಗಿಯ ಸಂಬಂಧಿಕರು ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com