ಜನ್ ಔಷಧಿ ಯೋಜನೆಯ ಮೂಲಕ ಕೋವಿಡ್-19 ಲಸಿಕೆ ಕೈಗೆಟುಕುವಂತೆ ಮಾಡಿ: ಐಎಂಎ

ಮುಕ್ತ ಮಾರುಕಟ್ಟೆಯಲ್ಲಿನ ಕೋವಿಡ್-19 ಲಸಿಕೆಯನ್ನು ಜನ್ ಔಷಧಿ ಯೋಜನೆಯ ಮೂಲಕ ಜನತೆಗೆ ಕೈಗೆಟುಕುವ ದರದಲ್ಲಿರುವಂತೆ ಮಾಡಲು ಭಾರತೀಯ ವೈದ್ಯಕೀಯ ಸಂಘ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಮುಂದಿಟ್ಟಿದೆ. 
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ನವದೆಹಲಿ: ಮುಕ್ತ ಮಾರುಕಟ್ಟೆಯಲ್ಲಿನ ಕೋವಿಡ್-19 ಲಸಿಕೆಯನ್ನು ಜನ್ ಔಷಧಿ ಯೋಜನೆಯ ಮೂಲಕ ಜನತೆಗೆ ಕೈಗೆಟುಕುವ ದರದಲ್ಲಿರುವಂತೆ ಮಾಡಲು ಭಾರತೀಯ ವೈದ್ಯಕೀಯ ಸಂಘ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಮುಂದಿಟ್ಟಿದೆ. 

18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಕೋವಿಡ್-19 ಲಸಿಕೆ ಸಿಗುವುದನ್ನು ಖಾತರಿಪಡಿಸಿಕೊಳ್ಳಬೇಕೆಂದು ಇದೇ ವೇಳೆ ಐಎಂಎ ಹೇಳಿದೆ. 

ಕೋವಿಡ್-19 ಸಾಂಕ್ರಾಮಿಕವನ್ನು ತಡೆಯುವುದರಿಂದ ಸಾಧಿಸಲಾಗುವ ಆರ್ಥಿಕ ಗಳಿಕೆಗಿಂತಲೂ 18 ರ ಮೇಲ್ಪಟ್ಟ ವಯಸ್ಸಿನವರಿಗೆ ಸಾರ್ವತ್ರಿಕವಾಗಿ ಲಸಿಕೆ ಹಾಕಿಸುವುದಕ್ಕೆ ತಗುಲುವ ವೆಚ್ಚ ಕಡಿಮೆ ಇರಲಿದೆ. 

ಲಸಿಕೆ ನೀಡುವುದು ವೈಯಕ್ತಿಕವಾಗಿಯಷ್ಟೇ ಅಲ್ಲದೇ ಹರ್ಡ್ ಇಮ್ಯುನಿಟಿಯ ಕಾರಣದಿಂದಾಗಿ ಸಮುದಾಯಕ್ಕೂ ಒಳಿತಾಗಲಿದೆ ಆದ್ದರಿಂದ ಲಸಿಕೆ ಅಭಿಯಾನ ಸರ್ಕಾರದ ಆದ್ಯತೆಯಾಗಿರಬೇಕೆಂದು ಐಎಂಎ ತಿಳಿಸಿದ್ದು ಲಸಿಕೆ ದರದಲ್ಲಿ ಪಾರದರ್ಶಕತೆಗೆ ಒತ್ತಾಯಿಸಿದೆ. 

ಈಗ ಲಸಿಕೆಯ ಬೆಲೆಯ ನಿರ್ಧಾರವನ್ನು ಉತ್ಪಾದಕರ ಕೈಗೇ ನೀಡಲಾಗಿದೆ. ಸೆರಮ್ ಇನ್ಸ್ಟಿಟ್ಯೂಟ್ ಲಸಿಕೆಗೆ 600 ರೂಪಾಯಿಗಳ ದರವನ್ನು ನಿಗದಿಪಡಿಸುವುದಾಗಿ ಘೋಷಿಸಿರುವುದು ಆಘಾತಕಾರಿಯಾಗಿದೆ ಎಂದು ಐಎಂಎ ಹೇಳಿದೆ. 

"ಬೆಲೆ ನಿಗದಿಯಲ್ಲಿ ಪಾರದರ್ಶಕತೆಯನ್ನು ಹಾಗೂ 18 ರ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಬೇಕೆಂದು ಐಎಂಎ ಒತ್ತಾಯಿಸುತ್ತದೆ" ಎಂದು ಪ್ರಕಟಣೆಯಲ್ಲಿ ಹೇಳಿದೆ. "ಲಸಿಕೆಗೆ ಬೆಲೆ ನಿಯಂತ್ರಣ ತರದೇ, ಉಚಿತವಾಗಿ ಲಸಿಕೆ ನೀಡಲು ಮೀಸಲಿಟ್ಟ 35000 ಕೋಟಿ ರೂಪಾಯಿಯನ್ನು ಬಳಕೆ ಮಾಡದೇ ಇದ್ದಲ್ಲಿ, ಸರ್ಕಾರ ಅಪಾಯಕ್ಕೆ ಸಿಲುಕಲಿದ್ದು, ದೇಶ ಆರ್ಥಿಕ ಹಾಗೂ ಆರೋಗ್ಯ ಕೇರ್ ಬಿಕ್ಕಟ್ಟಿನಲ್ಲಿ ಸಿಲುಕಲಿದೆ" ಎಂದು ಐಎಂಎ ಎಚ್ಚರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com