ಸಾವಿನ ಬಗ್ಗೆ ಟ್ವೀಟ್: ಸುಮಿತ್ರಾ ಮಹಾಜನ್ ಕ್ಷಮೆಯಾಚಿಸಿದ ಶಶಿ ತರೂರ್

ಲೋಕಸಭಾ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಸಾವು ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ನಂತರ ಅದನ್ನು ಡೀಲಿಟ್ ಮಾಡಿದ್ದರು. ಈಗ ಮಹಾಜನ್ ಪುತ್ರನಿಗೆ ಕರೆ ಮಾಡಿ...
ಶಶಿ ತರೂರ್
ಶಶಿ ತರೂರ್

ಇಂದೋರ್: ಲೋಕಸಭಾ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಸಾವು ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ನಂತರ ಅದನ್ನು ಡೀಲಿಟ್ ಮಾಡಿದ್ದರು. ಈಗ ಮಹಾಜನ್ ಪುತ್ರನಿಗೆ ಕರೆ ಮಾಡಿ ಕ್ಷಮೆಯಾಚಿಸಿದ್ದಾರೆ.

78 ವರ್ಷದ ಬಿಜೆಪಿ ನಾಯಕಿಯ ಸಾವಿನ ಬಗ್ಗೆ ಸಾಮಾಜಿ ಜಾಲತಾಣಲದಲ್ಲಿ ಸಾಕಷ್ಟು ವದಂತಿಗಳು ಹರಿದಾಡಿದ್ದವು. ಅಲ್ಲದೆ ಕೆಲವು ಮಾಧ್ಯಮಗಳಲ್ಲೂ ಸುದ್ದಿ ಪ್ರಸಾರವಾಗಿತ್ತು. ಶಶಿ ತರೂರ್ ಸಹ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದರು. ಆದರೆ ಮಹಾಜನ್ ತಾವು ಆರೋಗ್ಯವಾಗಿರುವುದಾಗಿ ಹೇಳಿದ ನಂತರ ಅದನ್ನು ಡಿಲೀಟ್ ಮಾಡಿದ್ದರು.

"ಕಳೆದ ರಾತ್ರಿಯ ತಪ್ಪು ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸಲು ಸುಮಿತ್ರಾ ಮಹಾಜನ್ ಜಿ ಅವರ ಮಗನೊಂದಿಗೆ ಮಾತನಾಡಿದ್ದೇನೆ. ಅವರು ಅತ್ಯಂತ ಕರುಣಾಮಯಿ ಮತ್ತು ತಿಳುವಳಿಕೆ ಹೊಂದಿದವರು. ಮಹಾಜನ್ ಅವರು ತುಂಬಾ ಆರೋಗ್ಯವಾಗಿದ್ದಾರೆ ಎಂದು ಕೇಳಿ ಸಂತೋಷವಾಯಿತು. ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸಿದ್ದೇನೆ" ಎಂದು ಶಶಿ ತರೂರ್ ಇಂದು ಟ್ವೀಟ್ ಮಾಡಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯೆಸಿರುವ ಸುಮಿತ್ರಾ ಮಹಾಜನ್ ನಾನು ಚೆನ್ನಾಗಿದ್ದೇನೆ. ಆರೋಗ್ಯವಾಗಿದ್ದೇನೆ ಕಾಂಗ್ರೆಸ್ ನಾಯಕ ಶಶಿ ತರೂರ್ ಹಾಗೆ ಮಾಡಿದ ಬಳಿಕ ನನ್ನ ಸಾವು ದೂರವಾಗಿದೆ. ಆದರೆ ನನ್ನ ಸಾವನ್ನು ಅಷ್ಟು ಅವಸರವಾಗಿ ಪ್ರಕಟ ಮಾಡುವ ಜರೂರು ಏನಿತ್ತು? ಎಂದು ಮಾಧ್ಯಮಗಳನ್ನು ಪ್ರಶ್ನೆ ಮಾಡಿದ್ದಾರೆ. ಮಾಹಿತಿ ಪರಿಶೀಲಿಸದೆ ಸುದ್ದಿ ಪ್ರಸಾರ ಮಾಡಿದ ಕೆಲವು ಸುದ್ದಿ ವಾಹಿನಿಗಳ ಮೇಲೂ ಮಹಾಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com