ದೆಹಲಿ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ: 20 ಮಂದಿ ಕೊರೋನಾ ರೋಗಿಗಳು ಸಾವು

ದೆಹಲಿಯಲ್ಲಿ ಕೊರೋನಾ ಸೋಂಕಿತರ ಪರಿಸ್ಥಿತಿ ಚಿಂತಾಜನಕವಾಗಿದೆ. ಆಕ್ಸಿಜನ್ ಕೊರತೆ ಹಿನ್ನೆಲೆ ದೆಹಲಿಯ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ 20 ರೋಗಿಗಳು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೆಹಲಿಯಲ್ಲಿ ಕೊರೋನಾ ಸೋಂಕಿತರ ಪರಿಸ್ಥಿತಿ ಚಿಂತಾಜನಕವಾಗಿದೆ. ಆಕ್ಸಿಜನ್ ಕೊರತೆ ಹಿನ್ನೆಲೆ ದೆಹಲಿಯ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ 20 ರೋಗಿಗಳು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 

ಸರ್ಕಾರ ಆಸ್ಪತ್ರೆಯ 3.5 ಮೆಟ್ರಿಕ್ ಟನ್ ನಷ್ಟು ಆಕ್ಸಿಜನ್ ನೀಡಿತ್ತು. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಆಕ್ಸಿಜನ್ ಆಸ್ಪತ್ರೆ ತಲುಪಬೇಕಿತ್ತು. ಆದರೆ, ಮಧ್ಯರಾತ್ರಿ ಬಂದಿತ್ತು. ಈ ವೇಳೆ ಗಂಭೀರ ಸ್ಥಿತಿಯಲ್ಲಿದ್ದ 20 ಮಂದಿ ರೋಗಿಗಳು ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿದ್ದಾರೆ ಎಂದು ಜಯಪುರ ಗೋಲ್ಡ್ ಆಸ್ಪತ್ರೆಯ ಎಂಡಿ ಡಾ.ಡಿ.ಕೆ.ಬಲೂಜಾ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ನಿನ್ನೆ ಬೆಳಿಗ್ಗೆ 10.45ರ ಸಮಯದಲ್ಲಿ ಎಲ್ಲಾ ರೋಗಿಗಳಿಗೆ ಅರ್ಧ ಗಂಟೆಯಷ್ಟು ಸಮಯ ನೀಡುವ ಆ್ಯಕ್ಸಿಜನ್ ಮಾತ್ತರ ನಮ್ಮ ಬಳಿ ಇತ್ತು. ಆಸ್ಪತ್ರೆಯಲ್ಲಿ 200 ಮಂದಿ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕ್ಸಿಜನ್ ಪೂರೈಕೆ ಮಾಡುವ ಕುರಿತು ಯಾರೊಬ್ಬರೂ ಸೂಕ್ತ ಭರವಸೆಗಳನ್ನು ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಸರ್ಕಾರದಿಂದ ಯಾವುದಾದರೂ ನೆರವು ಸಿಕ್ಕಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಅಧಿಕಾರಿಗಳು ನಮ್ಮಿಂದ ಸಾಧ್ಯವಾದಷ್ಟು ಶ್ರಮ ಪಡುತ್ತೇವೆಂದು ಹೇಳುತ್ತಿದ್ದಾರಷ್ಟೇ ಎಂದಿದ್ದಾರೆ. 

ಆಸ್ಪತ್ರೆಯಲ್ಲಿ 200 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಲ್ಲಿ ಶೇ.80 ರಷ್ಟು ಮಂದಿ ಆಕ್ಸಿಜನ್ ಬೆಂಬಲದಿಂದ ಇದ್ದಾರೆ. 35 ಮಂದಿ ಸೋಂಕಿತರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮಾಹಿತಿ ಬಲೂಜಾ ಅವರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com