ಅರುಣಾಚಲ ಪ್ರದೇಶ: ಕೋವಿಡ್ ಹೆಚ್ಚಳದ ನಡುವೆ ಜಾನುವಾರುಗಳಲ್ಲಿ ಕಾಲು ಬಾಯಿ ರೋಗ!

ಅರುಣಾಚಲ ಪ್ರದೇಶದಲ್ಲಿ ಕೋವಿಡ್-19 ನಡುವೆ ಕಾಣಿಸಿಕೊಂಡಿರುವ ಕಾಲು ಬಾಯಿ ಸಾಂಕ್ರಾಮಿಕ ರೋಗದಿಂದಾಗಿ ದನ, ಕರುಗಳು ಸೇರಿದಂತೆ ಅನೇಕ ಜಾನುವಾರುಗಳು ಸಾವನ್ನಪ್ಪುತ್ತಿದ್ದು, ಮತ್ತಿತರ ಪ್ರಾಣಿಗಳು ರೋಗ ಬಾಧೆಯಿಂದ ನರಳುತ್ತಿವೆ.
ಜಾನುವಾರಗಳ ಚಿತ್ರ
ಜಾನುವಾರಗಳ ಚಿತ್ರ

ಗುವಾಹಟಿ:ಅರುಣಾಚಲ ಪ್ರದೇಶದಲ್ಲಿ ಕೋವಿಡ್-19 ನಡುವೆ ಕಾಣಿಸಿಕೊಂಡಿರುವ ಕಾಲು ಬಾಯಿ ಸಾಂಕ್ರಾಮಿಕ ರೋಗದಿಂದಾಗಿ ದನ, ಕರುಗಳು ಸೇರಿದಂತೆ ಅನೇಕ ಜಾನುವಾರುಗಳು ಸಾವನ್ನಪ್ಪುತ್ತಿದ್ದು, ಮತ್ತಿತರ ಪ್ರಾಣಿಗಳು ರೋಗ ಬಾಧೆಯಿಂದ ನರಳುತ್ತಿವೆ.

ಸಿಯಾಂಗ್ ವಲಯದಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಪೂರ್ವ ಸಿಯಾಂಗ್, ಪಶ್ಚಿಮ ಸಿಯಾಂಗ್ ಜಿಲ್ಲೆಯಲ್ಲಿ ಜಾಸ್ತಿಯಾಗಿದ್ದು, ಜಾನುವಾರುಗಳಿಗೆ ಲಸಿಕೆ ಹಾಕಿದ ನಂತರವೂ ಸೋಂಕು ತಗುಲುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಲು ಬಾಯಿ ಸಾಂಕ್ರಾಮಿಕವನ್ನು ತಡೆಗಟ್ಟಲು ಕೂಡಲೇ  ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಟಾಸಿ ಟಾಕು ಶನಿವಾರ ತಿಳಿಸಿದ್ದಾರೆ.

ಈ ರೋಗದಿಂದ ಎಷ್ಟು ಸಂಖ್ಯೆಯಲ್ಲಿ ಜಾನುವಾರುಗಳು ಸಾವನ್ನಪ್ಪಿವೆ ಎಂಬುದರ ಬಗ್ಗೆ ಇಲಾಖೆಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಸಿಯಾಂಗ್ ಜಿಲ್ಲೆಯ ರಿಗಾ, ಪಂಗ್ ಕಾಂಗ್ ನಲ್ಲಿ ಸುಮಾರು ಒಂದು ಡಜನ್ ಗೂ ಹೆಚ್ಚು ಮಿಥುನ್ ಜಾನುವಾರುಗಳು ಸಾವನ್ನಪ್ಪಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ.

ಲಸಿಕೆ ಹಾಕಿದ ನಂತರವೂ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಈ ರೋಗವನ್ನು ತಡೆಗಟ್ಟುವುದು ಕಷ್ಟಕರವಾಗಿದೆ. ಕಳೆದ ವರ್ಷದ ಆಕ್ಟೋಬರ್ ನಲ್ಲಿ ಮೊದಲ ಹಂತದಲ್ಲಿ ಸುಮಾರು ಒಂದು ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿತ್ತು, ಆದರೆ, ಕೆಲ ಜಿಲ್ಲೆಗಳಲ್ಲಿ ಈ ಜಾನುವಾರುಗಳಲ್ಲಿಯೂ ರೋಗ ಕಾಣಿಸಿಕೊಂಡಿದೆ. ಈ ಸಾಂಕ್ರಾಮಿಕವನ್ನು ತಡೆಗಟ್ಟಲು ಅಧಿಕಾರಿಗಳು ಎಲ್ಲಾ ರೀತಿಯ
ಪ್ರಯತ್ನ ಮಾಡುತ್ತಿದ್ದಾರೆ ಎಂದು ಟಾಕು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com