ಲಸಿಕೆ ವಿತರಣೆಯಲ್ಲಿ ತಾರತಮ್ಯ; ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಕೇಂದ್ರದ ಒಲವು: ಮಮತಾ ಬ್ಯಾನರ್ಜಿ ಆರೋಪ

ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರವು ಕೆಲವು ರಾಜ್ಯಗಳ ಮೇಲೆ ಒಲವು ತೋರುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಆರೋಪಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲ್ಕೋತಾ: ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರವು ಕೆಲವು ರಾಜ್ಯಗಳ ಮೇಲೆ ಒಲವು ತೋರುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಆರೋಪಿಸಿದ್ದಾರೆ. 

ನವದೆಹಲಿ, ಪಶ್ಚಿಮ ಬಂಗಾಳಕ್ಕೆ ಮೀಸಲಾದ ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶಕ್ಕೆ ತಿರುಗಿಸಿದೆ ಎಂದು ಅವರು ದೂರಿದ್ದಾರೆ.

ಗುಜರಾತ್ ನ ಜನಸಂಖ್ಯೆಯ ಶೇ, 60 ರಷ್ಟು ಪ್ರಮಾಣದ ಲಸಿಕೆ ಹೊಂದಿದೆ, ಬೇರೆ ರಾಜ್ಯಗಳಿಗೆ ಕೇವಲ 15 ರಿಂದ 20 ರಷ್ಟು ಪ್ರಮಾಣದಲ್ಲಿ ಮಾತ್ರ ನೀಡಲಾಗಿದೆ, ಗುಜರಾತ್ ನ ಬಿಜೆಪಿ ಕಚೇರಿಗಳಲ್ಲಿ ಜನರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಆಪಾದಿಸಿದ್ದಾರೆ.

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್  ಪಶ್ಚಿಮ ಬಂಗಾಳಕ್ಕೆ ಆಮ್ಲಜನಕವನ್ನು ಪೂರೈಸುತ್ತಿತ್ತು. ಈಗ ಅದೇ ಸೇಲ್ ಅದೇ ಆಮ್ಲಜನಕವನ್ನು ಉತ್ತರ ಪ್ರದೇಶಕ್ಕೆ ಪೂರೈಸಲು ಕೇಂದ್ರದಿಂದ ನಿನ್ನೆ ಸೂಚನೆ ಬಂದಿದೆ. ಪಶ್ಚಿಮ ಬಂಗಾಳ ಭಿಕ್ಷೆ ಬೇಡುತ್ತಿದೆಯೇ? ಚುನಾವಣೆಯ ವಿಷಯ ಬಂದಾಗ ಅವರು ಬಂಗಾಳವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಇಲ್ಲಿಗೆ ಬರುತ್ತಾರೆ. ಆಮ್ಲಜನಕದ ಪೂರೈಕೆಯ ವಿಷಯ ಬಂದಾಗ ಅವರು ಅದನ್ನು ಬೇರೆ ರಾಜ್ಯಗಳಿಗೆ ತಿರುಗಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರವು 5,000 ಸಿಲಿಂಡರ್ ಆಮ್ಲಜನಕವನ್ನು ಸಂಗ್ರಹಿಸಿ ಕೋವಿಡ್ -19 ಆಸ್ಪತ್ರೆಗಳಿಗೆ ಕಳುಹಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.ಚುನಾವಣಾ ಕಾರ್ಯಕ್ರಮಗಳಿಗೆ ಹಾಜರಾಗಲು ಹೊರಗಿನವರನ್ನು ಕರೆತರುವ ಮೂಲಕ ಬಿಜೆಪಿ ನಾಯಕರು ಕೋವಿಡ್ -19 ಅನ್ನು ರಾಜ್ಯದಲ್ಲಿ ಹರಡಿದ್ದಾರೆ ಎಂದು ಮಮತಾ ಆರೋಪಿಸಿದರು.ಇನ್ನೂ ದೇಶವನ್ನು ಈ ಬಿಜೆಪಿಯೇ ಈ ಪರಿಸ್ಥಿತಿಗೆ ತಂದಿದೆ ಎಂದು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com