ಸಿಂಗಾಪುರದಿಂದ ಭಾರತಕ್ಕೆ ಐಎಎಫ್ ನಿಂದ 4 ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕರ್ ಏರ್ ಲಿಫ್ಟ್!

ದೇಶದ ಭೀಕರ ಕೋವಿಡ್ ಪರಿಸ್ಥಿತಿಯ ಮಧ್ಯೆ, ಆಮ್ಲಜನಕದ ಸಾಗಣೆಗೆ ಬಳಸಬೇಕಾದ ನಾಲ್ಕು ಕ್ರಯೋಜೆನಿಕ್ ಟ್ಯಾಂಕ್‌ಗಳನ್ನು ಶನಿವಾರ ಸಿಂಗಾಪುರದಿಂದ ವಿಮಾನದಲ್ಲಿ ತರಲಾಗುತ್ತಿದೆ.
ಸಿಂಗಾಪುರದಿಂದ ಭಾರತಕ್ಕೆ ಐಎಎಫ್ ನಿಂದ 4 ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕರ್ ಏರ್ ಲಿಫ್ಟ್!

ನವದೆಹಲಿ: ದೇಶದ ಭೀಕರ ಕೋವಿಡ್ ಪರಿಸ್ಥಿತಿಯ ಮಧ್ಯೆ, ಆಮ್ಲಜನಕದ ಸಾಗಣೆಗೆ ಬಳಸಬೇಕಾದ ನಾಲ್ಕು ಕ್ರಯೋಜೆನಿಕ್ ಟ್ಯಾಂಕ್‌ಗಳನ್ನು ಶನಿವಾರ ಸಿಂಗಾಪುರದಿಂದ ವಿಮಾನದಲ್ಲಿ ತರಲಾಗುತ್ತಿದೆ.

ನಾಲ್ಕು ಖಾಲಿ ಟ್ಯಾಂಕ್‌ಗಳನ್ನು ಭಾರತೀಯ ವಾಯುಪಡೆಯ ಹೆವಿ ಲಿಫ್ಟ್ ಸಾರಿಗೆ ವಿಮಾನದಿಂದ ಭಾರತಕ್ಕೆ ತರಲಾಗುತ್ತಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಎಎಫ್‌ನ ಸಿ-17 ವಿಮಾನವು ದೆಹಲಿಯ ಹೊರವಲಯದಲ್ಲಿರುವ ಹಿಂಡನ್ ವಾಯುನೆಲದಿಂದ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣಕ್ಕೆ ಶನಿವಾರ ಮುಂಜಾನೆ ಹೊರಟಿತ್ತು. ಟ್ಯಾಂಕ್‌ಗಳನ್ನು ಲೋಡ್ ಮಾಡಿದ ನಂತರ ವಿಮಾನವು ಇಂದು ಸಂಜೆ ಪಶ್ಚಿಮ ಬಂಗಾಳದ ಪನಾಅರ್ ವಾಯುನೆಲೆಯಲ್ಲಿ ಇಳಿಯುವ ನಿರೀಕ್ಷೆಯಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಸಿಂಗಾಪುರ ಮತ್ತು ಯುಎಇಯಿಂದ ಹೆಚ್ಚಿನ ಸಾಮರ್ಥ್ಯದ ಆಮ್ಲಜನಕ ಸಾಗಿಸುವ ಟ್ಯಾಂಕರ್‌ಗಳನ್ನು ಆಮದು ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಸುತ್ತಿದ್ದೇವೆ ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ತಿಳಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾದೇಶದ ಕೊರೋನಾ ವೈರಸ್ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com