ಉಲ್ಫಾ ಉಗ್ರರು ಅಪಹರಿಸಿದ್ದ ಒಎನ್ ಜಿಸಿಯ ಇಬ್ಬರು ಉದ್ಯೋಗಿಗಳ ರಕ್ಷಣೆ 

 ಅಸ್ಸಾಂ ನ ಉಲ್ಫಾ ಉಗ್ರರು ಅಪಹರಿಸಿದ್ದ ಆಯಿಲ್& ನ್ಯಾಚ್ಯುರಲ್ ಗ್ಯಾಸ್ ಕಾರ್ಪೊರೇಷನ್ (ಒಎನ್ ಜಿಸಿ) ಒಎನ್ ಜಿಸಿಯ ಮೂವರು ಉದ್ಯೋಗಿಗಳ ಪೈಕಿ ಇಬ್ಬರನ್ನು ಭದ್ರತಾ ಪಡೆಗಳು ರಕ್ಷಣೆ ಮಾಡಿದೆ. 
ಉಲ್ಫಾ ಉಗ್ರರು ಅಪಹರಿಸಿದ್ದ ಒಎನ್ ಜಿಸಿಯ ಇಬ್ಬರು ಉದ್ಯೋಗಿಗಳ ರಕ್ಷಣೆ
ಉಲ್ಫಾ ಉಗ್ರರು ಅಪಹರಿಸಿದ್ದ ಒಎನ್ ಜಿಸಿಯ ಇಬ್ಬರು ಉದ್ಯೋಗಿಗಳ ರಕ್ಷಣೆ

ಗುವಾಹಟಿ: ಉಲ್ಫಾ ಉಗ್ರರು ಅಪಹರಿಸಿದ್ದ ಆಯಿಲ್& ನ್ಯಾಚ್ಯುರಲ್ ಗ್ಯಾಸ್ ಕಾರ್ಪೊರೇಷನ್ (ಒಎನ್ ಜಿಸಿ)ಯ ಮೂವರು ಉದ್ಯೋಗಿಗಳ ಪೈಕಿ ಇಬ್ಬರನ್ನು ಭದ್ರತಾ ಪಡೆಗಳು ರಕ್ಷಣೆ ಮಾಡಿದೆ. 

ನಾಗಾಲ್ಯಾಂಡ್ ನ ಮೊನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಶುಕ್ರವಾರ (ಏ.23) ರಂದು ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಹಾಗೂ ಅಸ್ಸಾಂ ರೈಫಲ್ಸ್ ಟ್ರೂಪ್ಸ್, ಅಪಹರಣಕ್ಕೆ ಒಳಗಾಗಿದ್ದ ಇಬ್ಬರನ್ನು ರಕ್ಷಿಸಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದ್ದು, ಅಲಕೇಶ್ ಸೈಕಿಯಾ ಹಾಗೂ ಮೋಹಿನಿ ಮೋಹನ್ ಗೊಗೋಯ್ ರಕ್ಷಿಸಲ್ಪಟ್ಟ ಉದ್ಯೋಗಿಗಳಾಗಿದ್ದಾರೆ.  ಕಾರ್ಯಾಚರಣೆಯಲ್ಲಿ ಒಂದು AK 47 ನ್ನು ವಶಕ್ಕೆ ಪಡೆಯಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ. 

ಕಿರಿಯ ತಂತ್ರಜ್ಞರಾದ ಮೋಹಿನಿ ಮೋಹನ್ ಗೊಗೋಯ್, ರಿತುಲ್ ಸೈಕಿಯಾ ಹಾಗೂ ಜೆಇಎ ಅಲಕೇಶ್ ಸೈಕಿಯಾ ಅಸ್ಸಾಂ ನ ಲಾಕ್ವಾ ಫೀಲ್ಡ್ ನಲ್ಲಿ ರಿಗ್ ಸೈಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದರು. ಇದಕ್ಕೂ ಮುನ್ನ ಇದೇ ಘಟನೆಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು, ಉಲ್ಫಾ ಬೆಂಬಲಿಗರೂ ಸೇರಿ 14 ಮಂದಿಯನ್ನು ಬಂಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com