ಆಮ್ಲಜನಕ ಮತ್ತು ಆಮ್ಲಜನಕ ಸಂಬಂಧಿತ ಸಲಕರಣೆಗಳ ಸರಕು ಸಾಗಿಸುವ ಹಡಗುಗಳ ಶುಲ್ಕ ರದ್ದು: ಕೇಂದ್ರ ಸರ್ಕಾರ

ದೇಶದ ಎಲ್ಲಾ ಪ್ರಮುಖ ಬಂದರುಗಳಲ್ಲಿ ಆಮ್ಲಜನಕ ಮತ್ತು ಆಮ್ಲಜನಕ ಸಂಬಂಧಿತ ಸಲಕರಣೆಗಳ ಸರಕು ಸಾಗಿಸುವ ಹಡಗುಗಳ ಶುಲ್ಕ ರದ್ದು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದ ಎಲ್ಲಾ ಪ್ರಮುಖ ಬಂದರುಗಳಲ್ಲಿ ಆಮ್ಲಜನಕ ಮತ್ತು ಆಮ್ಲಜನಕ ಸಂಬಂಧಿತ ಸಲಕರಣೆಗಳ ಸರಕು ಸಾಗಿಸುವ ಹಡಗುಗಳ ಶುಲ್ಕ ರದ್ದು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಬಂದರು ಸಚಿವಾಲಯ, ದೇಶದ ಎಲ್ಲಾ ಪ್ರಮುಖ ಬಂದರುಗಳಲ್ಲಿ ಆಮ್ಲಜನಕ ಮತ್ತು ಆಮ್ಲಜನಕ ಸಂಬಂಧಿತ ಸಲಕರಣೆಗಳ ಸರಕು ಸಾಗಿಸುವ ಹಡಗುಗಳ ಶುಲ್ಕ ರದ್ದು ಮಾಡಲಾಗಿದೆ ಎಂದು ಹೇಳಿದೆ.

ಹಡಗುಗಳಲ್ಲಿ ರವಾನೆಯಾಗುವ ವೈದ್ಯಕೀಯ ಆಕ್ಸಿಜನ್, ಆಕ್ಸಿಜನ್ ಸಿಲಿಂಡರ್ ಗಳು, ಆಕ್ಸಿಜನ್ ಸಂಬಂಧಿತ ಸಲಕರಣೆಗಳ ಸರಕು ಸಾಗಿಸುವ ಹಡಗುಗಳ ಶುಲ್ಕ ರದ್ದು ಮಾಡಲಾಗಿದೆ. ಆ ಮೂಲಕ ದೇಶದಲ್ಲಿ ಆಕ್ಸಿಜನ್ ಪೂರೈಕೆ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮವಾಗದಂತೆ ಸೂಚಿಸಲಾಗಿದೆ ಎಂದು  ಇಲಾಖೆ ಮಾಹಿತಿ ನೀಡಿದೆ. 

ದೇಶಾದ್ಯಂತ ಕೋವಿಡ್-19 2ನೇ ಅಲೆ ಅಬ್ಬರ ಜೋರಾಗಿದ್ದು, ದೇಶದ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲೂ ವೈದ್ಯಕೀಯ ಆಕ್ಸಿಜನ್ ಕೊರತೆಯಿಂದಾಗಿ ಕೋವಿಡ್ ರೋಗಿಗಳು ಸಂಕಷ್ಟ ಪಡುವಂತಾಗಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಆಕ್ಸಿಜನ್ ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ಆರಂಭಿಸಿದ್ದು, ಎಲ್ಲ ರಾಜ್ಯಗಳಿಗೂ ಆಕ್ಸಿಜನ್ ಸರಬರಾಜು ಮಾಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com