ಉತ್ತರ ಪ್ರದೇಶದ ಯಾವುದೇ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ- ಯೋಗಿ ಆದಿತ್ಯನಾಥ್

 ಉತ್ತರ ಪ್ರದೇಶದ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲೂ ಆಕ್ಸಿಜನ್ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಲಖನೌ: ಉತ್ತರ ಪ್ರದೇಶದ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲೂ ಆಕ್ಸಿಜನ್ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ವಿವಿಧ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಜೀವ ರಕ್ಷಕ ಅನಿಲದ ಅಡಿಟ್ ನ್ನು ಸರ್ಕಾರ  ಮಾಡಲಿದೆ.ಜನರು ಕೊರೋನಾವೈರಸ್ ವಿರುದ್ಧದ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಬೇಡಿ. ಇದನ್ನು ಸಾಮಾನ್ಯ ಜ್ವರ ಎಂದು ತೆಗೆದುಕೊಳ್ಳುದು ತುಂಬಾ ತಪ್ಪು ಎಂದಿದ್ದಾರೆ.

ಕಾಳಸಂತೆಯಲ್ಲಿ ಆಕ್ಸಿಜನ್ ಮಾರಾಟ ಹಾಗೂ ದಾಸ್ತಾನಿನಿಂದ ಸಮಸ್ಯೆಯಾಗುತ್ತಿದೆ. ಹಲವರ ನೆರವಿನಿಂದ ಅದನ್ನು ಪತ್ತೆ ಹಚ್ಚಲಾಗುವುದು, ಐಐಟಿ ಕಾನ್ಫುರ, ಐಐಎಂ ಲಖನೌ, ಮತ್ತು ಐಐಟಿ ಬಿಹೆಚ್ ಯು ಸಹಭಾಗಿತ್ವದಲ್ಲಿ ಆಕ್ಸಿಜನ್ ಆಡಿಟ್ ಮಾಡಲಾಗುವುದು, ಆಕ್ಸಿಜನ್ ಬೇಡಿಕೆ,ಪೂರೈಕೆ ಮತ್ತು ವಿತರಣೆಗೆ ನೇರ ವ್ಯವಸ್ಥೆ ಅನುಷ್ಠಾನಗೊಳಿಸಲಾಗುವುದು ಎಂದು ಅವರು
ತಿಳಿಸಿದ್ದಾರೆ.

ಕಳೆದ ಬಾರಿಗಿಂತ 30 ಪಟ್ಟು ಸೋಂಕಿತರ ಸಂಖ್ಯೆ ಈ ಬಾರಿ ಹೆಚ್ಚಾಗಿದೆ. 31 ಹೊಸ ಆಕ್ಸಿಜನ್ ಫ್ಲಾಂಟ್  ಸ್ಥಾಪನೆ ಬಗ್ಗೆ ಕೆಲಸ ಪ್ರಗತಿಯಲ್ಲಿದೆ.ರೆಮಿಡಿಸಿವಿರ್ ನಂತರ ಚುಚ್ಚುಮದ್ದುಗಳಿಗೂ ರಾಜ್ಯದಲ್ಲಿ ಕೊರತೆಯಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com